ಹೊಸಂಗಡಿ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ಮುಂದುವರಿಕೆ: ಮಳೆಯಿಂದಾಗಿ ಮತ್ತೆ ಅಡಚಣೆ ಉಂಟಾಗಲು ಸಾಧ್ಯತೆ

Share with

ಮಂಜೇಶ್ವರ: ತಲಪಾಡಿಯಿಂದ ಚೆಂಗಳ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿರುವಂತೆ ಮಳೆಯಿಂದಾಗಿ ವಿವಿಧ ಕಡೆಗಳಲ್ಲಿ ಕಾಮಗಾರಿಗೆ ಅಡಚಣೆಯೂ ಉಂಟಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿರುವಂತೆ ಮಳೆಯಿಂದಾಗಿ ವಿವಿಧ ಕಡೆಗಳಲ್ಲಿ ಕಾಮಗಾರಿಗೆ ಅಡಚಣೆಯೂ ಉಂಟಾಗುತ್ತಿದೆ.

ಇದರಂತೆ ಹೊಸಂಗಡಿ ಪೇಟೇಯಲ್ಲಿ ಮಳೆಯಿಂದಾಗಿ ಕಾಮಗಾರಿಗೆ ತೀವ್ರ ಅಡಚಣೆ ಉಂಟಾಗುತ್ತಿದ್ದು, ಇಲ್ಲಿನ ಹೆದ್ದಾರಿ ನಿರ್ಮಾಣ ವಿಳಂಬಗೊಳ್ಳುವ ಸಾದ್ಯತೆ ಉಂಟಾಗಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದೆ. ಹೊಸಂಗಡಿ ಪೇಟೆಯಲ್ಲಿ ಹೆದ್ದಾರಿ ಸಂಚಾರ ಭಾರೀ ಕೆಳಭಾಗದಿಂದ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಕಾಮಗಾರಿಯೂ ಭರದಿಂದ ಸಾಗುತ್ತಿದೆ.

ಆದರೆ ಮಳೆಯ ಆರಂಭದಲ್ಲಿ ಇಲ್ಲಿನ ಸೇತುವೆಯ ಒಂದು ಭಾಗದಲ್ಲಿ ಭಾರೀ ಎತ್ತರಕ್ಕೆ ನೀರು ಸಂಗ್ರಹಗೊಂಡ ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ಮಳೆ ಕಡಿಮೆಗೊಂಡಾಗ ಸಂಕದ ಇನ್ನೊಂದು ಭಾಗದಿಂದ ನೀರನ್ನು ಬಿಡಲಾಗಿದೆ. ಅಲ್ಲದೆ ಮಣ್ಣು ಜರಿದುಬಿದ್ದ ಪರಿಣಾಮ ತಡೆಗೋಡೆಗೆ ಕಟ್ಟಲಾದ ಕಬ್ಬಿಣ ಸಾಲುಗಳು ಹಾನಿಗೀಡಾಗಿದೆ. ಇದೀಗ ಅಲ್ಪ ಸ್ವಲ್ಪ ಇದ್ದ ನೀರನ್ನು ಕಳೆದ ಹಲವು ದಿನಗಳಿಂದ ತೆರವುಗೊಳಿಸಲಾಗುತ್ತಿದ್ದು, ಕೂಡಲೇ ಜಲ್ಲಿ ಹಾಕಿ ರಸ್ತೆ ನಿರ್ಮಾಣದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಈ ರಸ್ತೆ ನಿರ್ಮಾಣದ ಆರಂಭದಲ್ಲೇ ಈ ಪರಿಸರದಲ್ಲಿ ಬೃಹತ್ ಕಗ್ಗಲ್ಲು ಪತ್ತೆಯಾಗಿ ಅದನ್ನು ಸಂಪೂರ್ಣ ತೆರವುಗೊಳಿಸಲು ಹಲವಾರು ತೆರವು ಕಾರ್ಯ ನಡೆದಿತ್ತು. ಇದೀಗ ಮಳೆಯಿಂದಾಗಿ ಮತ್ತೆ ಕಾಮಗಾರಿಗೆ ಅಡಚಣೆ ಉಂಟಾಗುತ್ತಿರುವುದು ಉದ್ಯೋಗಸ್ಥರನ್ನು ಸಮಸ್ಯೆಗೀಡಾಗುವಂತೆ ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳ ವರ್ಗ ಶೀಘ್ರವಾಗಿ ಕಾಮಗಾರಿಯನ್ನು ಪೂರ್ತಿಗೊಳಿಸಿ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *