ಮಂಜೇಶ್ವರ: 60 ವರ್ಷ ಪೂರ್ತಿಕರಿಸಿದ ಎಲ್ಲಾ ಕಾರ್ಮಿಕರಿಗೆ ಮಿನಿಮ ಪೆನ್ಷನ್ 5000/ ರೂ ಮಾಡಬೇಕು. ಕ್ರಷಿ ಕ್ಷೇಮನಿಧಿ ಬೋರ್ಡ್ ನಲ್ಲಿ ಬಿಎಂಎಸ್ ಗೆ ಪ್ರಾತಿನಿಧ್ಯ ನೀಡಬೇಕು. ಕ್ಷೇಮನಿಧಿ ಸೌಲಭ್ಯ ಸಮಯೋಜಿತವಾಗಿ ನೀಡಬೇಕು. ಕಾರ್ಮಿಕರಿಗೆ ಕ್ಷೇಮನಿಧಿ ಸೌಲಭ್ಯ ಕಾಲಕ್ಕೆ ಅನುಸಾರವಾಗಿ ನೀಡಬೇಕು. ಕಳೆದ ಕೆಲವು ತಿಂಗಳಿನಿಂದ ಕಾರ್ಮಿಕರಿಗೆ ನೀಡಲು ಬಾಕಿ ಇದ್ದ ಪಿಂಚಣಿ ಕೂಡಲೇ ಜಾರಿಗೊಳಿಸಬೇಕು. ಎಂಬಿ ಬೇಡಿಕೆಗಳನ್ನು ಮುಂದಿಟ್ಟು ಬಿ ಎಂ ಎಸ್ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಮಂಜೇಶ್ವರ ಪಂಚಾಯತ್ ಆಫೀಸ್ ಧರಣಿ ಸತ್ಯಾಗ್ರಹ ನ.15ರಂದು ನಡೆಸಲಾಯಿತು.
ಸಮಿತಿ ಅಧ್ಯಕ್ಷರಾದ ರವಿ ಮಜಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ಲೀಲಾಕ್ರಷ್ಣನ್ ಮುಳ್ಳೇರಿಯ ಉದ್ಘಾಟನೆ ಮಾಡಿ ಕಾರ್ಮಿಕರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಎಡರಂಗ ಸರಕಾರದ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡದೆ ನವಕೇರಳ ಯಾತ್ರೆ ಮಾಡಿ ಜನರ ಮನ ಮೆಚ್ಚಿಸುವುದನ್ನು ತೀವ್ರವಾಗಿ ಖಂಡಿಸಿದರು.
ಜಿಲ್ಲಾ ಜೊತೆ ಕಾರ್ಯದರ್ಶಿಯಾದ ದಿನೇಶ್ ಬಂಬ್ರಾಣ, ವಲಯ ಅಧ್ಯಕ್ಷ ರವಿ ಎಂ ಕೆ.ಕೊಲ್ಯೂರು ಶುಭಕೋರಿದರು. ವಲಯ ಪದಾಧಿಕಾರಿಗಳಾದ ಭಾಸ್ಕರ ಬಿ ಎಂ, ಶ್ರೀಧರ.ಬಿ.ಎಂ, ರೋಹಿತ್ ಮಜಿಬೈಲ್, ನವೀನ ಕಣ್ವತೀರ್ಥ, ರಾಘವ ಕುಂಜತ್ತೂರು ಎಂಬವರು ಭಾಗವಹಿಸಿದರು. ಬಿಎಂಎಸ್ ಮಂಜೇಶ್ವರ ಪಂಚಾಯತ್ ಕಾರ್ಯದರ್ಶಿ ಕೆ.ಪಿ.ಪ್ರಕಾಶ್ ಸ್ವಾಗತ ನೀಡಿ, ರವಿ ಮಜಲ್ ಧನ್ಯವಾದ ನೀಡಿದರು.