ಉಪ್ಪಳ: ನವಕೇರಳ ಸಭೆ ಬೃಹತ್ ಕಾರ್ಯಕ್ರಮದ ಪ್ರಚಾರಾರ್ಥದ ಅಂಗವಾಗಿ ಬೀದಿ ಬದಿ ಚಿತ್ರರಚನೆ ಕಾರ್ಯಕ್ರಮ ನ.14ರಂದು ಸಂಜೆ ಪೈವಳಿಕೆ ನಗರದಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸಿದರು. ಆರ್.ಡಿ.ಒ ಅತುಲ್ ಸ್ವಾಮಿನಾಥನ್, ತಶೀಲ್ದಾರರಾದ ಸಜೀತಿ, ಮೋಹನ್‌ರಾಜ್, ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಜನಪ್ರತಿನಿಗಳಾದ ಅಬ್ದುಲ್ಲ, ಶ್ರೀನಿವಾಸ ಭಂಡಾರಿ, ಪೈವಳಿಕೆ ನಗರ ಶಾಲೆಯ ಮುಖ್ಯೋಪಧ್ಯಾಯ ಇಬ್ರಾಹಿಂ, ಪ್ರಾಂಶುಪಾಲ ರಘುರಾಮ ಆಳ್ವ ಉಪಸ್ಥಿತರಿದ್ದರು.
ಶ್ಯಾಮ್ ಭಟ್ ಮಾಸ್ತರ್ ಸ್ವಾಗತಿಸಿ, ಹಾರೀಸ್ ಧನ್ಯವಾದ ನೀಡಿದರು. ಶಶಿಶ್ಯಾಮ, ಪ್ರಕಾಶ್ ಕುಂಬಳೆ, ಜಯಪ್ರಕಾಶ್ ನೀರ್ಚಾಲ್ ಹಾಗೂ ಕಲೋತ್ಸವದಲ್ಲಿ ಮಿಂಚಿದ ಪ್ರತಿಭೆಗಳು ಭಾಗವಹಿಸಿ ವಿವಿಧ ಚಿತ್ರಗಳನ್ನು ರಚಿಸಿದರು.