ಉಡುಪಿ: ವಿಶ್ವಕಪ್ ಕ್ರಿಕೆಟ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿ ಮಣಿಪಾಲ್ ಸ್ಯಾಂಡ್ ಆರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ್, ರವಿ ಹಿರೆಬೆಟ್ಟು ಕಾಪು ಕಡಲ ಕಿನಾರೆಯಲ್ಲಿ ಮರಳುಶಿಲ್ಪ ರಚಿಸಿದರು.
ಕಡಲಕಿನಾರೆಗೆ ಆಗಮಿಸಿದ ಪ್ರವಾಸಿಗರಿಗೆ ಕಲಾಕೃತಿಯು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಆಭರಣ ಜ್ಯುವೆಲ್ಲಾರಿಯ ಸಹಯೋಗದೊಂದಿಗೆ ಶಿಲ್ಪ ರಚನೆ ನಡೆಯಿತು.