ಪುತ್ತೂರು: ಬನ್ನೂರು ಕೃಷ್ಣ ನಗರ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Share with

ಪುತ್ತೂರು: ಬನ್ನೂರು ಕೃಷ್ಣ ನಗರ ಅಲುಂಬುಡ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.15ರಂದು ಮಕ್ಕಳ ದಿನಾಚರಣೆ ಜರಗಿತು.

ಬನ್ನೂರು ಕೃಷ್ಣ ನಗರ ಅಲುಂಬುಡ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಜರಗಿತು.

ಹಲವು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಹುಭಾಷಾ ಮಕ್ಕಳ ಸಾಹಿತಿ ಉಲ್ಲಾಸಣ್ಣ (ಯು.ಕೆ.ಪೈ) ಅವರು ಪಾಲ್ಗೊಂಡು ಕಾರ್ಯಕ್ರಮದ ಔಚಿತ್ಯದ ಬಗ್ಗೆ ತಿಳಿಸಿದರು ಹಾಗೆಯೇ ಮಕ್ಕಳೊಂದಿಗೆ ಮಕ್ಕಳಾಗಿ ಶಿಶು ಗೀತೆಗಳನ್ನು ಮಕ್ಕಳಿಗೆ ಅಭಿನಯದ ಮೂಲಕ ಹೇಳಿಕೊಟ್ಟರು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದರು. ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳೆಲ್ಲರೂ ಸೇರಿ ಕೇಕ್ ಕಟ್ಟ್ ಮಾಡುವ ಮೂಲಕ ಸಂಭ್ರಮಿಸಿದರು.

ಎವಿಜಿ ಶಾಲೆಯ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಉಷಾ ಕಿರಣ ಕೆ.ಎಸ್ ಇವರು ಎಲ್ಲರನ್ನೂ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕ ಗಂಗಾಧರ ಗೌಡ, ಅವಿನಾಶ್ ಕೆ.ಟಿ, ಹಾಗೂ ಪೋಷಕ ವೃಂದದವರು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾಲೆಯ ಸಹ ಶಿಕ್ಷಕಿ ಯಶುಭ ರೈ ಹಾಗೂ ಶಾಲೆಯ ಶಿಕ್ಷಕೇತರ ವೃಂದದವರಾದ ಭುವನೇಶ್ವರಿ, ತಿಮ್ಮಪ್ಪ ಗೌಡ ಸಹಕರಿಸಿದರು. ಎವಿಜಿ ಸಂಸ್ಥೆಯ ಉಪಾಧ್ಯಕ್ಷರಾದ ಉಮೇಶ್ ಮಳುವೇಲು ಇವರು ವಂದಿಸಿದರು. ಸಹ ಶಿಕ್ಷಕಿಯಾದ ವನಿತಾರವರು ಕಾರ್ಯಕ್ರಮ ನಿರೂಪಿಸಿದರು, ಸಹಭೋಜನದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.


Share with

Leave a Reply

Your email address will not be published. Required fields are marked *