ಮಂಜೇಶ್ವರ: ಭಾರತೀಯ ಜನತಾ ಪಾರ್ಟಿ ವರ್ಕಾಡಿ ಪಂಚಾಯತ್ ಸಮಿತಿ ವತಿಯಿಂದ ಜನ ಪಂಚಾಯತ್ ಬೃಹತ್ ಸಾರ್ವಜನಿಕ ಸಭೆ ಇಂದು ಸಂಜೆ 4ಗಂಟೆಗೆ [20-11-2023] ವರ್ಕಾಡಿ ಮಜೀರ್‌ಪಳ್ಳ ಪೇಟೇಯಲ್ಲಿ ನಡೆಯಲಿದೆ.
ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರಫುಲ್‌ಕೃಷ್ಣ ಪ್ರಧಾನ ಭಾಷಣ ಮಾಡುವರು. ಕೇರಳ ರಾಜ್ಯ ಸರಕಾರದ ಸೃಜನಾ ಪಕ್ಷಪಾತ, ಭೃಷ್ಟಾಚಾರ, ವಂಚನೆ, ಜನವಿರೋಧಿ ನೀತಿಗೆದುರಾಗಿ, ಮುಸ್ಲಿಂಲೀಗ್, ಕಾಂಗ್ರೇಸ್ ಪಕ್ಷಗಳ ಮತೀಯ ಓಲೈಕೆಗೆದುರಾಗಿ, ವರ್ಕಾಡಿ ಪಂಚಾಯತ್ ಆಡಳಿತ ನಿಷ್ಕ್ರೀಯತೆ, ಜನ ದ್ರೋಹ ಆಡಳಿತರ ವಿವರಗಳನ್ನು ನಾಡಿನ ಜನತೆಗೆ ತಿಳಿಸುವುದಕ್ಕೋಸ್ಕರ ಜನ ಪಂಚಾಯತ್ ಬೃಹತ್ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ.