ಬಿ.ಎಂ.ಎಸ್ ಪುತ್ತಿಗೆ ಪಂಚಾಯತ್ ಸಮಿತಿಯಿಂದ ಪಂಚಾಯತ್ ಕಚೇರಿ ಮುಂದೆ ಧರಣಿ

Share with

ಪುತ್ತಿಗೆ: ಬಿ.ಎಂ.ಎಸ್ ಪಂಚಾಯತ್ ಸಮಿತಿ ವತಿಯಿಂದ ಪುತ್ತಿಗೆ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲಾಯಿತು. ಬಿ.ಎಂ.ಎಸ್ ವಲಯ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ಬಿ.ಸತ್ಯನಾದನ್ ಉದ್ಘಾಟಿಸಿದರು.

ಪಂಚಾಯತ್ ಕಚೇರಿ ಮುಂದೆ ಧರಣಿ.

ಜಿಲ್ಲಾ ಜತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ, ಕುಂಬಳೆ ವಲಯ ಕೋಶಾಧಿಕಾರಿ ಐತ್ತಪ್ಪ, ನಾರಾಯಣ ಮಂಗಲ, ಹರಿಶ್ ಮುಕಾರಿ ಕಂಡ ಮಾತನಾಡಿ ಬೇಡಿಕೆಗೆ ಯಾವುದೇ ಬೆಲೆ ಕಲ್ಪಿಸದ ಸರಕಾರದ ಅವಗಣನೆಗೆ ಎದುರಾಗಿ ಎಲ್ಲಾ ಪಂಚಾಯತ್ ಮುಂಬಾಗದಲ್ಲಿಯೂ 25-11-23 ರಂದು ಶೆಕ್ರೆಟರಿಯೆಟ್ ಮುಂಬಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ತೀಮಾನಿನಲಾಗಿದೆ.

ಕೃಷಿ ಕಾರ್ಮಿಕರಿಗೆ ನೀಡಬೇಕಾದ ಪಿಂಚಣಿಯನ್ನು ನೀಡಿ, ಸಮಯಕ್ಕೆ ಅನು ಸಾರವಾಗಿ ಹೆಚ್ಚಳಗೊಳಿಸಿ 5000 ವಾಗಿ ನೀಡಬೇಕು. ಅವರು ನಿಕ್ಷೇಪಿಸಿದ ಮೊತ್ತವನ್ನು ಅವರಿಗೆ ನಿವೃತ್ತರಾಗುವ ಸಮಯದಲ್ಲಿ ಹಿಂದಿರುಗಿಸಬೇಕು. ಬಿ.ಯಂ.ಎಸ್ ಗೆ ಬೋರ್ಡಿನಲ್ಲಿ ಸದಸ್ಯತನವನ್ನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ವಿವರಿಸಿದರು. ಲೋಕೇಶ್ ಬಾಡೂರು ಸ್ವಾಗತಿಸಿ . ರವಿ ಕಣ್ಣೂರು ವಂದಿಸಿದರು. ಗಣೇಶ್, ಶಿಶಿಧರ, ಉದಯ ಕುಮಾರ್, ರಾಮಚಂದ್ರ ಕುಲಾಲ್, ನಾಗೇಶ್ ಆಚರ‍್ಯ ಮುಂತಾದವರು ನೇತೃತ್ವ ನೀಡಿದರು.


Share with

Leave a Reply

Your email address will not be published. Required fields are marked *