ಅಕ್ಷಯ ಕಾಲೇಜಿನಲ್ಲಿ “ಅಟೆರ್ನಸ್ 2k23” ಸಮಾರೋಪ

Share with

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ “ಅಟೆರ್ನಸ್ 2k23” ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಅಂತರ ಕಾಲೇಜ್ ಪಿಯು ವಿಭಾಗದ ಸ್ಪರ್ಧೆಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಅಕ್ಷಯ ಕಾಲೇಜಿನಲ್ಲಿ "ಅಟೆರ್ನಸ್ 2k23" ಅಂತರ ಕಾಲೇಜ್ ಪಿಯು ವಿಭಾಗದ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆದರ್ಶ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ಸ್ ಇದರ ಮಾಲಕರಾದ ಶ್ರೀ ಅಬ್ದುಲ್ ರಹಿಮಾನ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸುವುದರಲ್ಲಿ ಪ್ರಯತ್ನ ಪಡಬೇಕೆ ಹೊರತು ಬಹುಮಾನದ ನಿರೀಕ್ಷೆಯಲ್ಲಿ ಇರಬಾರದು ಎಂದರು.

ಅಕ್ಷಯ ಕಾಲೇಜಿನಲ್ಲಿ "ಅಟೆರ್ನಸ್ 2k23" ಸಮಾರೋಪ.

ಈ ಸ್ಪರ್ಧೆಯಲ್ಲಿ ಸುಮಾರು 23 ಕಾಲೇಜುಗಳು ಭಾಗವಹಿಸಿದ್ದು ಜನತಾ ಕಾಲೇಜು‌ ಅಡ್ಯನಡ್ಕ, ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿತು. ಪ್ರಥಮ ರನ್ನರ್ ಆಪ್ ಏನ್ ಎಂ ಸಿ ಸುಳ್ಯ ಹಾಗೂ ದ್ವಿತೀಯ ರನ್ನರ್ ಅಪ್ ಆಗಿ ಎಸ್ಎಂಎಸ್ ಕಾಲೇಜ್ ವಿರಾಜಪೇಟೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಸ್ಪರ್ಧೆಯ ಎಲ್ಲಾ ಟ್ರೋಫಿ ಹಾಗೂ ಫಲಕಗಳನ್ನು ಆದರ್ಶ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಇದರ ಮಾಲಕರಾದ ಶ್ರೀ ಅಬ್ದುಲ್ ರಹಿಮಾನ್ ಪ್ರಾಯೋಜಿಸಿದರು. ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ವಿಜೇತರಾದ ಎಲ್ಲಾ ತಂಡಗಳನ್ನು ಅಭಿನಂದಿಸಿದರು.

ಸ್ಪರ್ಧೆಯ ವಿಜೇತರ ವಿವರ:
ಫ್ಯಾನ್ಸಿ ಡ್ರೆಸ್ ರೋಲ್ ಪ್ಲೇ ಸ್ಪರ್ಧೆಯಲ್ಲಿ ಕು.ಸಲೀನ ಕೆ, ಎಸ್ ಎಮ್ ಎಸ್ ಕಾಲೇಜು ವಿರಾಜ್‌ಪೇಟೆ ಪ್ರಥಮ ಸ್ಥಾನ, ಅಕ್ಷಯ್ ಎಂ ಎಸ್, ಕೆ ಎಸ್ ಗೌಡ ಕಾಲೇಜು ನಿಂತಿಕಲ್ಲು ದ್ವಿತೀಯ ಸ್ಥಾನ, ಕು.ವಿಂಧ್ಯಶ್ರೀ ರೈ, ಸಂತ ಫಿಲೋಮಿನಾ ಕಾಲೇಜು ತೃತೀಯ ಸ್ಥಾನ, ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಕು.ಮೋಕ್ಷ, ಜನತಾ ಪಿ ಯು ಕಾಲೇಜು, ಅಡ್ಯನಡ್ಕ ಪ್ರಥಮ ಸ್ಥಾನ, ಜಿಎಂ ಸೋಹನ್, ಎನ್ ಎಂ ಸಿ ಸುಳ್ಯ ದ್ವಿತೀಯ ಸ್ಥಾನ, ಕು.ಭೋಜಮ್ಮ ಟಿ ಎನ್, ಎಸ್ ಎಂ ಎಸ್ ಕಾಲೇಜ್ ವಿರಾಜಪೇಟೆ ತೃತೀಯ ಸ್ಥಾನ. ಡಿಬೇಟ್ ಸ್ಪರ್ಧೆಯಲ್ಲಿ ಕು.ಆಫ್ರಿನಾ ಎಸ್ಎಂಎಸ್ ಕಾಲೇಜ್ ವಿರಾಜಪೇಟೆ ಪ್ರಥಮ ಸ್ಥಾನ, ಕು.ರಫಾಮರಿಯಂ, ಮೆಲ್ಕಾರ್ ಮಹಿಳಾ ಪಿಯು ಕಾಲೇಜು ದ್ವಿತೀಯ ಸ್ಥಾನ, ಮೋಕ್ಷಿತ್ ಸೆಕ್ರೆಡ್ ಹಾರ್ಟ್ ಮಡಂತ್ಯಾರು ತೃತೀಯ ಸ್ಥಾನ, ಸೋಲೋ ಡಾನ್ಸ್ ಸ್ಪರ್ಧೆಯಲ್ಲಿ ಕು.ಇಂಚರ ಎಸ್ ಕೆ ಸರಕಾರಿ ಮಹಿಳಾ ಕಾಲೇಜು ಮುಕ್ರಂಪಾಡಿ ಪ್ರಥಮ ಸ್ಥಾನ, ಕು.ಪೂಜಾಶ್ರೀ ಜನತಾ ಪಿಯು ಕಾಲೇಜು ಅಡ್ಯನಡ್ಕ ದ್ವಿತೀಯ ಸ್ಥಾನ, ಕು.ಸಮೃದ್ಧಿ ಎನ್ ಎಂ ಸಿ ಸುಳ್ಯ ತೃತೀಯ ಸ್ಥಾನ, ಪಾಟ್ ಡೆಕೋರೇಷನ್ ಸ್ಪರ್ಧೆಯಲ್ಲಿ ಕು.ನವ್ಯಶ್ರೀ, ಜನತಾ ಪಿಯು ಕಾಲೇಜು ಪ್ರಥಮ ಸ್ಥಾನ, ಕು.ಭೋಜಮ್ಮ ಟಿ ಎನ್, ಎಸ್ ಎಂ ಎಸ್ ಪಿಯು ಕಾಲೇಜು ವಿರಾಜಪೇಟೆ ದ್ವಿತೀಯ ಸ್ಥಾನ, ಕು.ಫಾತಿಮಾ ಶೈಮಾ, ಮೇಲ್ಕಾರ್ ಮಹಿಳಾ ಪಿಯು ಕಾಲೇಜು ಮೆಲ್ಕರ್ ತೃತೀಯ ಸ್ಥಾನ, ಕ್ವಿಜ್ ಸ್ಪರ್ಧೆಯಲ್ಲಿ ಎಸ್ ಡಿ ಎಂ ಪಿ ಯು ಕಾಲೇಜು, ಉಜಿರೆ ಪ್ರಥಮ ಸ್ಥಾನ, ಸಂತ ಫಿಲೋಮಿನಾ ಪಿ ಯು ಕಾಲೇಜು ದ್ವಿತೀಯ ಸ್ಥಾನ, ಎನ್‌ಎಂಸಿ ಸುಳ್ಯ ತೃತೀಯ ಸ್ಥಾನ. ಕುಕಿಂಗ್ ವಿಥೌಟ್ ಫೈಯರ್ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಕಂಪೋಸಿಟ್ ಪಿಯು ಕಾಲೇಜ್ ಮಂಗಳೂರು ಪ್ರಥಮ ಸ್ಥಾನ, ಜನತಾ ಪಿಯು ಕಾಲೇಜು ಅಡ್ಯನಡ್ಕ ದ್ವಿತೀಯ ಸ್ಥಾನ, ಮಹಿಳಾ ಪಿಯು ಕಾಲೇಜು ಮೆಲ್ಕಾರ್ ತೃತೀಯ ಸ್ಥಾನ. ಸಮೂಹ ಗಾಯನ ಸ್ಪರ್ಧೆಯಲ್ಲಿ ಎನ್ ಎಂ ಸಿ ಸುಳ್ಯ, ಪ್ರಥಮ ಸ್ಥಾನ, ಸರಕಾರಿ ಮಹಿಳಾ ಕಾಲೇಜು ಮುಕ್ರಾಂಪಾಡಿ ದ್ವಿತೀಯ ಸ್ಥಾನ, ಕೆ ಎಸ್ ಗೌಡ ಕಾಲೇಜು ನಿಂತಿಕಲ್ಲು ತೃತೀಯ ಸ್ಥಾನ. ಪೇಪರ್ ಔಟ್ ಫಿಟ್ ಸ್ಪರ್ಧೆಯಲ್ಲಿ ಎನ್ ಎಂ ಸಿ ಸುಳ್ಯ ಪ್ರಥಮ ಸ್ಥಾನ, ಕೆ ಎಸ್ ಗೌಡ ಕಾಲೇಜು ನಿಂತಿಕಲ್ಲು ದ್ವಿತೀಯ ಸ್ಥಾನ, ಮೆಲ್ಕಾರ್ ಮಹಿಳಾ ಪಿಯು ಕಾಲೇಜು ಮೆಲ್ಕಾರ್ ತೃತೀಯ ಸ್ಥಾನ, ಫೇಸ್ ಆಫ್ ಅಟೆರ್ನೆಸ್ ಸ್ಪರ್ಧೆಯಲ್ಲಿ ಕೆ ಎಸ್ ಗೌಡ ಕಾಲೇಜು ನಿಂತಿ ಯಕಲ್ಲು ಪ್ರಥಮ ಸ್ಥಾನ ಪಡೆದಿರುತ್ತಾರೆ.

ವೇದಿಕೆಯಲ್ಲಿ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್ ಪ್ರಾಂಶುಪಾಲ ಶ್ರೀ ಸಂಪತ್‌ ಕೆ ಪಕ್ಕಳ, ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ ಎ, ವಿದ್ಯಾರ್ಥಿ ಸಂಘದ ನಾಯಕ ವಿನೋದ್ ಕೆ ಸಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ರಶ್ಮಿ ಕೆ ಸ್ವಾಗತಿಸಿ , ಕಿಶೋರ್ ಕುಮಾರ್ ರೈ ಕೆ ವಂದಿಸಿದರು. ಉಪನ್ಯಾಸಕರಾದ ಶ್ರೀ ರೋಷನ್ ಆ್ಯಂಟನಿ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *