ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಸಮಾವೇಶದ ಪೂರ್ವಭಾವಿ ಸಭೆ

Share with

ಬಂಟ್ವಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ನಡೆಯುವ ಸಾಹಿತ್ಯ ಸಮಾವೇಶದ ಪೂರ್ವಭಾವಿ ಸಭೆಯು ಮುಡಿಪುವಿನ ಕೈರಂಗಳದ ಪುಣ್ಯಕೋಟಿ ನಗರದಲ್ಲಿರುವ ಗಣಪತಿ ವಿದ್ಯಾ ಕೇಂದ್ರದಲ್ಲಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ ರಾಜಾರಾಮ ಭಟ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಸಾಹಿತ್ಯ ಸಮಾವೇಶವು ವಿವಿಧ ಸಾಹಿತ್ಯ ಪ್ರಸ್ತುತಿ ಮತ್ತು ಸಾಂಸ್ಕೃತಿಕ ಗೋಷ್ಠಿಗಳೊಂದಿಗೆ ಕೈರಂಗಳದ ಪುಣ್ಯಕೋಟಿ ನಗರದಲ್ಲಿರುವ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಡಿಸೆಂಬರ್ 1 ರಂದು ನಡೆಸಲಾಗುವುದು ಎಂದು ಅ.ಭಾ.ಸಾ.ಪ. ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಡಾ|ಸುರೇಶ ನೆಗಳಗುಳಿ ಅವರು ಪ್ರಕಟಿಸಿ ರಾಷ್ಟ್ರೀಯ ಚಿಂತನೆಯ ಕಾರ್ಯಕ್ರಮದ ಯಶಸ್ಸಿಗೆ ಸಾಹಿತ್ಯಾಭಿಮಾನಿಗಳ ಸಹಕಾರ ಅಗತ್ಯವೆಂದು ಹೇಳಿದರು.

ಅ.ಭಾ.ಸಾ.ಪ ನಿಕಟಪೂರ್ವ‌ ಅಧ್ಯಕ್ಷರಾದ ಜಯಾನಂದ ಪೆರಾಜೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ
ಕವನ-ಕಾವ್ಯ-ವಾಚನ, ದೇಶ ಭಕ್ತಿ ಗೀತೆ, ಹಾಡು-ನೃತ್ಯ, ರಸಪ್ರಶ್ನೆ, ಪೌರಾಣಿಕ ಪಾತ್ರ ನಿರೂಪಣೆ, ವಿದ್ಯಾರ್ಥಿ ಕವಿಗೋಷ್ಠಿಗಳನ್ನು ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗಾಗಿ ಸಂಯೋಜಿಸಲಾಗುವುದು ಎಂದು‌ ಸಮಾವೇಶದ ರೂಪುರೇಷೆಗಳನ್ನು ತಿಳಿಸಿದರು.

ಅ.ಭಾ.ಸಾ.ಪ ಉಪಾಧ್ಯಕ್ಷ ಈಶ್ವರ ಪ್ರಸಾದ ಕನ್ಯಾನ, ಕೋಶಾಧಿಕಾರಿ ಪ್ರಶಾಂತ ಕಲ್ಲಡ್ಕ, ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಮೊಡಂಕಾಪು, ಉಪ ಪ್ರಾಂಶುಪಾಲೆ ರಮಣಿ ಭಂಡಾರಿ, ಕೈರಂಗಳ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಡಿ.ಲಮಾಣಿ, ಹಿರಿಯ ಶಿಕ್ಷಕ ಚಂದ್ರ ಕುಮಾರ್ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನಿತ್ತರು.

ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶ್ರೀಹರಿ ಅವರ ಮಾರ್ಗದರ್ಶನದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.


Share with

Leave a Reply

Your email address will not be published. Required fields are marked *