ಮಂಜೇಶ್ವರ: ಮನೆ ಬಳಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳವುಗೈಯ್ಯಲಾಗಿದ್ದು, ಸಿಸಿ ಕ್ಯಾಮರದಲ್ಲಿ ಕಳ್ಳನ ದೃಶ್ಯ ಪತ್ತೆಯಾಗಿದೆ.
ಕುಂಜತ್ತೂರು ಪಳ್ಳ ನಿವಾಸಿ ನಿವೃತ್ತ ಪೋಸ್ಟ್ ಮೆನ್ ಭಾಸ್ಕರ ಎಂಬವರ ಪಲ್ಸರ್ ಬೈಕ್ ಕಳವುಗೀಡಾಗಿದೆ. ಈ ಬಗ್ಗೆ ಮಂಜೇಶ್ವರ ಪೋಲೀಸರಿಗೆ ದೂರು ನೀಡಿದ್ದು, ಕೇಸು ದಾಖಲಿಸಿದ್ದಾರೆ.
ಈ ತಿಂಗಳ 14ರಂದು ರಾತ್ರಿ ಮನೆ ಬಳಿಯಲ್ಲಿರಿಸಿದ ಬೈಕ್‌ನ್ನು ಕದ್ದಿದ್ದಾರೆ. ವ್ಯಕ್ತಿಯೊಬ್ಬ ಬೈಕ್‌ನ್ನು ಕಳವುಗೈಯ್ಯುತ್ತಿರುವ ದೃಶ್ಯ ಇವರ ಸಿಸಿ ಕ್ಯಾಮರದಲ್ಲಿ ಪತ್ತೆಯಾಗಿದೆ. ಈ ದೃಶ್ಯವನ್ನು ಪೊಲೀಸರಿಗೆ ನೀಡಿದ್ದಾರೆ.