ಉಪ್ಪಳ: ಭಾರತ್ ಲಾಟರಿ ಏಜನ್ಸಿಯಾಗಿರುವ ಮೊರತ್ತಣೆ ಬಳಿಯ ಬಟ್ಯಪದವ್ ನಿವಾಸಿ ಮೇರಿ ಕುಟ್ಟಿಯವರ ಏಜನ್ಸಿ ನಂಬ್ರ[s 1447] ರಲ್ಲಿ 300 ರೂಗಳ ಬೆಲೆಯ ಪೂಜಾ ಬಂಪರ್ ಲಾಟರಿ ರಿಛಿ 253199 ನಂಬ್ರದ ಲಾಟರಿಗೆ 12 ಕೋಟಿ ರೂ ಬಹುಮಾನ ಹಾಗೂ ಇವರ ಪತಿ ಜೋಜೋ ಜೋಸೆಫ್ ರವರ ಏಜನ್ಸಿ ನಂಬ್ರ [s 1413] ಎಆ 504106 ನಂಬ್ರಕ್ಕೆ ಒಂದು ಕೋಟಿ ರೂ ದ್ವಿತೀಯ ಬಹುಮಾನ ಬಂದಿರುವುದಾಗಿ ಅವರು ತಿಳಿಸಿದ್ದಾರೆ.
ಇಷ್ಟು ದೊಡ್ಡ ಮೊತ್ತ ಲಭಿಸುವುದು ಇದು ಮೊದಲ ಬಾರಿಯಾಗಿದ್ದು, 100 ರಿಂದ 3 ಲಕ್ಷ ರೂ ತನಕ ಈ ಹಿಂದೆ ಬಹುಮಾನ ಬಂದಿರುವುದಾಗಿ ದಂಪತಿ ತಿಳಿಸಿದ್ದಾರೆ.
ಈ ದಂಪತಿಯರು ಮೂಲತ ಕಣ್ಣೂರು ಜಿಲ್ಲೆಯ ಮಣಕಡವ್ ನಿವಾಸಿಗಳಾಗಿದ್ದು, ಅಲ್ಲಿದ್ದ ಸ್ಥಳಗಳನ್ನು ಮಾರಾಟ ಮಾಡಿ ಕಳೆದ 13 ವರ್ಷಗಳಿಂದ ಬಟ್ಯಪದವ್‌ನಲ್ಲಿ ವಾಸವಾಗಿದ್ದಾರೆ. ಕೃಷಿಕರೂ ಆಗಿದ್ದು, ಕಳೆದ 5 ವರ್ಷಗಳಿಂದ ದಂಪತಿಯರು ಲಾಟರಿ ಏಜನ್ಸಿ ಪಡೆದು ಲಾಟರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಕಣ್ಣೂರು, ಎರ್ನಾಕುಳಂ, ಕಾಸರಗೋಡು ಸಹಿತ ವಿವಿಧ ಕಡೆಗಳಲ್ಲಿ ವಾಹನದ ಮೂಲಕ ಹಾಗೂ ಸ್ನೇಹಿತರ ಮೂಲಕ ಅತ್ಯಧಿಕ ಲಾಟರಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಮಜೀರ್ಪಳ್ಳದಲ್ಲಿರುವ ಇವರ ಸ್ಠಾಲ್‌ನಿಂದ ಕರ್ನಾಟಕದಿಂದಲೂ ಆಗಮಿಸಿ ಲಾಟರಿಯನ್ನು ಖರೀದಿಸಲಾಗುತ್ತಿದೆ. ಇವರಿಗೆ ಇಬ್ಬರು ಪುತ್ರರು, ಓರ್ವೆ ಪುತ್ರಿ. ಬಹುಮಾನದ ಗ್ರಾಹಕರು ಯಾರೆಂಬುದು ಇನ್ನೂ ತಿಳಿದು ಬಂದಿಲ್ಲ.