ವೀಕ್ಷಕವಾಣಿ: ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ ನಟನೊಬ್ಬನ ಗೋಲ್ಡ್ ಕಾಯಿನ್ ಮತ್ತು ಗೋಲ್ಡ್ ಬಿಸ್ಕೆಟ್ ರಿಲೀಸ್ ಆಗಿದೆ. ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾಗೆ ಪ್ರವಾಸ ಬೆಳೆಸಿ, ಅಲ್ಲಿ ಬಂಗಾರದ ಅಂಗಡಿಯ ಉದ್ಘಾಟನೆಯನ್ನು ನೆರವೇರಿಸಿದ್ದರು. ಅದೇ ಅಂಗಡಿಯವರು ರಾಕಿಭಾಯ್ ಯಶ್ ಹೆಸರಿನಲ್ಲಿ ಗೋಲ್ಡ್ ಕಾಯಿನ್ ಮತ್ತು ಬಿಸ್ಕೆಟ್ ಬಿಡುಗಡೆ ಮಾಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿವೆ.
ಮಲೇಷ್ಯಾಗೆ ಹೋಗಿರುವ ಸಂದರ್ಭದಲ್ಲೇ ಯಶ್ ತಮ್ಮ ಮುಂದಿನ ಹೊಸ ಸಿನಿಮಾದ ಕುರಿತು ಮಾತನಾಡಿರುವ ಯಶ್, ‘ದೊಡ್ಡ ಸಿನಿಮಾವನ್ನು ಮಾಡುತ್ತೇನೆ ಎಂದು ಹೇಳುತ್ತಿಲ್ಲ, ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದೊಂದು ಮಾಸ್ ಸಿನಿಮಾವಾಗಿರಲಿದೆ. ಸದ್ಯದಲ್ಲೇ ಮಾಹಿತಿ ನೀಡುತ್ತೇನೆ’ ಎಂದು ಮಾತನಾಡಿದ್ದಾರೆ.