ಉಪ್ಪಳ: ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದು ಚಾಲಕ ಸಣ್ಣ ಪುಟ್ಟ ಗಾಯಗೊಂಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಗುರುವಾರ ಮಧ್ಯಾಹ್ನ ಬಾಯಾರು ಭಾಗದಿಂದ ಕೈಕಂಬ ಕಡೆಗೆ ಸಂಚರಿಸುತ್ತಿದ ಶಿಫ್ಟ್ ಕಾರು ಶಾಂತಿಗುರಿ ಬಳಿಯಲ್ಲಿ ನಿಯಂತ್ರಣ ತಪ್ಪಿ ಸರ್ವೇ ಕಲ್ಲಿಗೆ ಡಿಕ್ಕಿಹೊಡೆದು ರಸ್ತೆ ಬದಿಯಲ್ಲಿ ಮಗುಚಿ ಬಿದ್ದಿದೆ.
ಮಣ್ಣಂಗುಳಿ ಸೋಂಕಾಲು ನಿವಾಸಿ ಎ.ಎಚ್ ಅಬ್ದುಲ್ ಅಜೀಜ್‌ಎಂಬವರು ಕಾರು ಚಲಾಯಿಸುತ್ತಿರುವುದಾಗಿ ತಿಳಿದು ಬಂದಿದೆ. ಕಾರಿನೊಳಗೆ ಸಿಲುಕಿಕೊಂಡಿದ್ದ ಇವರನ್ನು ಸ್ನೇಹಿತರು ಸೇರಿ ಮೇಲಕ್ಕೆತ್ತಿ ಸ್ಥಳೀಯ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆಕೊಡಿಸಿ ತೆರಳಿದೆನ್ನಲಾಗಿದೆ. ಸ್ಥಳಕ್ಕೆ ಪೋಲೀಸರು ತಲುಪಿಮಾಹಿತಿ ಸಂಗ್ರಹಿಸಿದ್ದಾರೆ