ಊಟಕ್ಕೆ ಉಪ್ಪಿನಕಾಯಿ ಹೇಗೋ ಅದೇ ರೀತಿ ಹಪ್ಪಳವೂ ಹಾಗೆಯೇ. ಇದನ್ನು ಪ್ರತಿಯೊಬ್ಬರೂ ತಿನ್ನಲು ಇಷ್ಟಪಡುತ್ತಾರೆ. ಆದರೆ ನಿಮಗೆ ಗೊತ್ತೆ ಹಪ್ಪಳದಲ್ಲಿಯೂ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಇದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಅನೇಕ ರೀತಿಯ ಲಾಭಗಳಿವೆ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತದೆ. ಜೊತೆಗೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹಪ್ಪಳಗಳಲ್ಲಿ ಕಾರ್ಬೋಹೈಡ್ರೇಟ್ ಗಳು ಸಮೃದ್ಧವಾಗಿದ್ದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಆರೋಗ್ಯ ತಜ್ಞರ ಪ್ರಕಾರ, ಹಪ್ಪಳಗಳಲ್ಲಿ ಪ್ರೋಟೀನ್ಗಳು, ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ ಹಾಗಾಗಿ ಇದನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ.
ಪೌಷ್ಟಿಕತಜ್ಞರ ಪ್ರಕಾರ ಇದರಲ್ಲಿ ಸಾಕಷ್ಟು ಫೈಬರ್ ಅಂಶವಿದೆ. ಊಟದ ಜೊತೆಗೆ ಈ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತದೆ. ಇದು ಸಂಪೂರ್ಣವಾಗಿ ಗ್ಲುಟೆನ್ ಮುಕ್ತವಾಗಿದೆ. ಹಪ್ಪಳಗಳು ಕಾರ್ಬೋಹೈಡ್ರೇಟ್ ಗಳು, ಮೆಗ್ನೀಸಿಯಮ್, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅದರಲ್ಲಿಯೂ ಹಪ್ಪಳಗಳಲ್ಲಿ ಕ್ಯಾಲೊರಿಗಳು ಕಡಿಮೆ ಇರುತ್ತವೆ. ಆದ್ದರಿಂದ, ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಆಹಾರದಲ್ಲಿ ಹಪ್ಪಳವನ್ನು ಸಹ ಸೇರಿಸಬಹುದು. ಅದಲ್ಲದೆ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮೂಲಕ ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸುತ್ತದೆ. ಪ್ರೋಟೀನ್ ಕೂಡ ಅಧಿಕವಾಗಿರುತ್ತದೆ. ಅಲರ್ಜಿಯ ಹೊರತಾಗಿ ಹಪ್ಪಳ ಸೇವನೆ ಮಾಡುವುದು ಬಹಳ ಸುರಕ್ಷಿತವಾಗಿದೆ. ಎಲ್ಲಾ ವಯಸ್ಸಿನವರು ಕೂಡ ಜೊತೆಗೆ ಮಧುಮೇಹ ಇರುವವರು ಕೂಡ ವೈದ್ಯರ ಸಲಹೆಯನುಸಾರ ಸೇವನೆ ಮಾಡಬಹುದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಹಪ್ಪಳದಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಕಣ್ಣಿಗೆ ಸಂಬಂಧಿಸಿದ ಆರೋಗ್ಯ ಅಸ್ವಸ್ಥತೆಗಳು ಮತ್ತು ಕಿವಿಗೆ ಸಂಬಂಧಿತ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ವಿಶೇಷವಾಗಿ, ಇದು ಕಬ್ಬಿಣ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ ಎಂದು ಹೇಳಲಾಗುತ್ತದೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತವಾಗಿ ಹಪ್ಪಳ ಸೇವನೆ ಮಾಡುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಜ್ವರ ಬಂದ ಸಮಯದಲ್ಲಿ ನಿಮಗೆ ಏನನ್ನೂ ತಿನ್ನಲು ಮನಸ್ಸಾಗುವುದಿಲ್ಲ, ಹಸಿವು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ, ಹುರಿದ ಕಡಲೆ ಬೇಳೆ ಹಪ್ಪಳವನ್ನು ತಿನ್ನುವುದು ಹಸಿವನ್ನು ಹೆಚ್ಚಿಸುತ್ತದೆ. ತಿನ್ನುವ ಬಯಕೆ ಹೆಚ್ಚಾಗುತ್ತದೆ. ಹಾಗಾಗಿ ಇದು ಆರೋಗ್ಯಕ್ಕೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.