ಪುತ್ತೂರು: ಕ್ರಿಕೆಟ್ ಪಂದ್ಯಾಟ ಆಯೋಜಿಸಿ ಲಾಭಾಂಶವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವ ಮೂಲಕ ಮನೆ ಮಾತಾಗಿರುವ ಆಲಂಕಾರಿನ ಸೂಪರ್ ಸ್ಟ್ರೈಕರ್ಸ್ ನಿಂದ ಮುಂಬರುವ ಜನವರಿ ತಿಂಗಳಿನಲ್ಲಿ ಮೂರನೇ ವರ್ಷದ ಆಲಂಕಾರು ಪ್ರೀಮಿಯಂ ಲೀಗ್ ನಡೆಯಲಿದೆ.
ಕಳೆದ ಎರಡು ವರ್ಷಗಳಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿ ಪಂದ್ಯಾಕೂಟದಲ್ಲಿ ಗಳಿಸಿದ ಲಾಭಾಂಶವನ್ನು ಬಡವರಿಗೆ ಮನೆ ನಿರ್ಮಾಣಕ್ಕೆ, ಕ್ಯಾನ್ಸರ್ ಸಹಿತ ಇತರ ಅನಾರೋಗ್ಯ ಪೀಡಿತರಿಗೆ ನೆರವು ನೀಡಿರುವ ಸೂಪರ್ ಸ್ಟ್ರೈಕರ್ಸ್ ಬಳಗದವರು ಈ ಬಾರಿ ಮೂರನೇ ಸೀಸನ್ APL-2023 ಆಯೋಜಿಸಿದ್ದು ಈ ಬಾರಿಯೂ ಬಡವರಿಗೆ ಆರ್ಥಿಕ ನೆರವು ನೀಡಲಿದ್ದಾರೆ.
ಜನವರಿ 20 ಮತ್ತು 21ರಂದು ಆಲಂಕಾರು ದುರ್ಗಾಂಬಾ ಸಾರ್ವಜನಿಕ ಮೈದಾನದಲ್ಲಿ ಆರು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು ದಶಂಬರ್ 24ರಂದು ಆಲಂಕಾರು ಸಿ.ಎ. ಬ್ಯಾಂಕ್ ಬಳಿ ಆಟಗಾರರ ಹರಾಜು ನಡೆಯಲಿದೆ.
ಪಂದ್ಯಾಟದಲ್ಲಿ ಪ್ರಥಮ ಸ್ಥಾನಿಯಾದವರಿಗೆ 33 ಸಾವಿರ ರೂ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನಿಯಾದವರಿಗೆ 22 ಸಾವಿರ ರೂ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಸಮಾಜಮುಖಿ ಕಾರ್ಯಕ್ಕಾಗಿ ನಡೆಸಲಾಗುತ್ತಿರುವ ಈ ಪಂದ್ಯಾಟಕ್ಕೆ ಪ್ರಾಯೋಜಕರಾಗಲು, ಪಂದ್ಯಾಟದ ನೇರ ಪ್ರಸಾರದಲ್ಲಿ ಜಾಹೀರಾತು ನೀಡಲು ಬಯಸುವವರು 8722276957 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.