ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದಲ್ಲಿ ಡಿ.17ರಿಂದ ಜ.14ರ ತನಕ ನಡೆಯಲಿರುವ ಧನುರ್ಮಾಸ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಕ್ಷೇತ್ರದಲ್ಲಿ ನ.26ರಿಂದ ನಡೆಯಿತು.
ಕ್ಷೇತ್ರದ ಮೊಕ್ತೇಸರರಾದ ಉಳುವಾರು ವೆಂಕಟ್ರಮಣ ಆಚಾರ್ಯ ಕೋಟೆಕಾರು, ದೇವದಾಸ ಆಚಾರ್ಯ, ಕ್ಷೇತ್ರದ ಅಧ್ಯಕ್ಷರಾದ ಯದುನಂದನ ಆಚಾರ್ಯ ಕಡಂಬಾರು, ಕಾರ್ಯದರ್ಶಿ ಭಾಸ್ಕರ ಆಚಾರ್ಯ ಪ್ರತಾಪನಗ, ನಾಗರಾಜ ಆಚಾರ್ಯ ಪಾರಕಟ್ಟೆ, ಕೋಶಾಧಿಕಾರಿ ಸತ್ಯಮೂರ್ತಿ ಆಚಾರ್ಯ ಉದ್ಯಾವರ, ಪ್ರಾಂತ್ಯ ಮೊಕ್ತೇಸರಾದ ಗಣೇಶ ಆಚಾರ್ಯ, ಜಯಂತ ಆಚಾರ್ಯ ವಿಷ್ಣು ಆಚಾರ್ಯ, ಓಜ ಸಾಹಿತ್ಯ ಕೂಟದ ಅಧ್ಯಕ್ಷ ಮೋಹನ ಚಂದ್ರ ಆಚಾರ್ಯ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕರಾದ ಪ್ರಕಾಶ್ಚಂದ್ರ ಶ್ರೌತಿ ಉಪಸ್ಥಿತರಿದ್ದರು.