ಮಂಜೇಶ್ವರ: ವಿವಿಧ ಸಮಸ್ಯೆಗಳಿಂದ ಕೂಡಿದ ಮಂಜೇಶ್ವರ ಹಾಗೂ ಉಪ್ಪಳ ರೈಲ್ವೇ ನಿಲ್ದಾಣಕ್ಕೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್‌ರವರು ನ.27ರಂದು ಭೇಟಿ ನೀಡಿ ನಿಲ್ದಾಣದ ಸ್ಥಿತಿಗತಿಗಳನ್ನು ವೀಕ್ಷಿಸಿ ನಿಲ್ದಾಣಗಳ ಸಮಸ್ಯೆಯನ್ನು ಪರಿಹರಿಸಲು ಕ್ರಮಕೈಗೊಳ್ಳಲು ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.
ನ.27ರಂದು ಮಧ್ಯಾಹ್ನ ಮಂಜೇಶ್ವರ ನಿಲ್ದಾಣಕ್ಕೆ ತಲುಪಿದ ಸಂಸದರವರ ವಿರುದ್ದ ಎಸ್.ಡಿ.ಪಿ.ಐ ಕಾರ್ಯಕರ್ತರು ಕಪ್ಪು ಪತಾಕೆಯನ್ನು ತೋರಿಸಿ ಪ್ರತಿಭಟಿಸಿದರು. ರೈಲ್ವೇ ನಿಲ್ದಾಣದ ಬಗ್ಗೆ ಕಿಂಚತ್ತೂ ಗಮನ ಹರಿಸದ ಕೇವಲ ವೋಟ್ ಬ್ಯಾಂಕ್‌ನ ಉದ್ದೇಶದಿಂದ ಸಂಸದರು ಭೇಟಿ ಮಾಡಿದ್ದಾರೆ ಎಂದು ಆರೋಪಿಸಿ ಎಸ್.ಡಿ.ಪಿ.ಐ ಕಾರ್ಯಕರು ಸಂಸದರ ವಿರುದ್ದ ದಿಕ್ಕಾರ ಕೂಗಿಕೊಂಡು ಪ್ರತಿಭಟನೆ ನಡೆಸಿದರು.
ಭಾರೀ ಸಂಖ್ಯೆಯಲ್ಲಿ ಪೊಲೀಸರು ಬಂದೊಬಸ್ತುಗೊಳಿಸಿದ್ದರು. ಹರ್ಷಾದ್ ವರ್ಕಾಡಿ, ಬಿ.ಎಂ ಮನ್ಸೂರ್, ಡಿ.ಎಂ.ಕೆ ಮೊಹಮ್ಮದ್, ಇರ್ಷಾದ್, ಓಂಕೃಷ್ಣ, ಲೀಗ್ ನೇತಾರರಾದ ಸೈಫುಲ್ಲ ತಂಞಳ್, ಅಜೀಜ್ ಮರಿಕೆ, ಮುಸ್ತಾಫ ಉದ್ಯಾವರ, ಫಾರೂಕ್ ಚೆಕ್ಪೋಸ್ಟ್ ಮೊದಲಾದವರು ಉಪಸ್ಥಿತರಿದ್ದರು. ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದ ರೈಲು ನಿಲ್ದಾಣವಾಗಿದ್ದರೂ ಕಳೆದ ನಾಲ್ಕೂವರೆ ರ‍್ಷಗಳಲ್ಲಿ ಸಂಸದರು ಇತ್ತ ತಿರುಗಿ ನೋಡಿಲ್ಲ ಎಂದು ಎಸ್ಡಿಪಿಐ ಆರೋಪಿಸಿದೆ.
ಮೇಲ್ಸೇತುವೆ ಇಲ್ಲದ ಕಾರಣ ಈಗಾಗಲೇ ಅನೇಕ ಸಾವುಗಳು ಸಂಭವಿಸಿದೆಯಾದರೂ ಈ ಬಗ್ಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಇತ್ತಕಡೆ ತಿರುಗಿಯೂ ನೋಡದ ಕಾರಣ ಪ್ರತಿಭಟನೆ ಅನಿವರ‍್ಯವಾಗಿತ್ತೆಂದು ನೇತಾರರು ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟನೆಗೆ ನೇತಾರರಾದ ಅಶ್ರಫ್ ಬಡಾಜೆ, ಹಾರಿಸ್ ಉದ್ಯಾವರ, ರಿಯಾಜ್ ಕುನ್ನಿಲ್, ಮೋನುಞ ಉದ್ಯಾವರ ಹಾಗೂ ಇಬ್ರಾಹಿಂ ಮಂಜೇಶ್ವರ ನೇತೃತ್ವ ನೀಡಿದರು.
ಸಂಜೆ ಉಪ್ಪಳ ರೈಲ್ವೇ ನಿಲ್ದಾಣಕ್ಕೆ ಸಂಸದರು ಭೇಟಿ ನೀಡಿ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಲೀಗ್ ನೇತಾರರಾದ ಅಜೀಜ್ ಮರಿಕೆ, ಎಂ.ಬಿ ಯೂಸಫ್, ಪಿ.ಎಂ ಸಲೀಮ್, ಅಬ್ದುಲ್ಲ ಮಾದೇರಿ, ಸಾಹುಲ್ ಹಮೀದ್ ಬಂದ್ಯೋಡು, ಮೊಹಮ್ಮದ್ ನಾಫಿ, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಲ್, ಅಲಿ ಮಾಸ್ತರ್, ಅಜೀಮ್ ಮಣಿಮುಂಡ, ಕಾಂಗ್ರೇಸ್ ನೇತಾರರಾದ ಮಂಜುನಾಥ ಆಳ್ವ, ಬಾಬು ಬಂದ್ಯೋಡು, ಓಂಕೃಷ್ಣ, ಪ್ರದೀಪ್ ಶೆಟ್ಟಿ, ಆರೀಸ್ ಪಾರಕಟ್ಟೆ, ಮನ್ಸೂರ್ ಕಂಡತ್ತಿಲ್, ಮೊಹಮ್ಮದ್ ದೀನಾರ್‌ನಗರ್, ಸ್ಥಳೀಯರಾದ ಕುಟ್ಟಿಕೃಷ್ಣನ್ ಗುರುಸ್ವಾಮಿ, ಕೃಷ್ಣ ಹಾಗೂ ರೈಲ್ವೇ ಹೋರಾಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.