ಮಂಗಳೂರು: ಅತ್ತಾವರದ ಅಪಾರ್ಟ್ಮೆಂಟ್ ಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಮಹಿಳೆಯೊಬ್ಬರು ಸಾವನಪ್ಪಿದ್ದ ಘಟನೆ ಸಂಭವಿಸಿದೆ. ಮೃತಪಟ್ಟ ಮಹಿಳೆಯನ್ನು ಸಹೈನ್ ಮೂಸಬ್(57) ಎಂದು ಗುರುತಿಸಲಾಗಿದೆ.
ನಗರದ ಅತ್ತಾವರದ ಐವರಿ ಟವರ್ ಎಂಬ ಅಪಾರ್ಟ್ಮೆಂಟ್ ನ ಫ್ಲ್ಯಾಟ್ ವೊಂದರಲ್ಲಿ ನ.28ರಂದು ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ್ಟ್ಮೆಂಟ್ ಬೆಂಕಿ ತಗುಲುವ ವೇಳೆ ಮಹಿಳೆ ಸಹೈನ್ ಮೂಸಬ್ ( 57) ಬಾತ್ ರೂಂ ಗೆ ತೆರಳಿದ್ದರು.
ಅವರು ಬಾತ್ ರೂಂ ನೊಳಗೆ ಸಿಲುಕಿದ್ದರಿಂದ ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮನೆಯೊಳಗಿದ್ದ ಮತ್ತೊಬ್ಬರು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ತಗುಲುವ ಸಂದರ್ಭದಲ್ಲಿ ಮನೆಯಲ್ಲಿ ಒಂಭತ್ತು ಮಂದಿ ಇದ್ದರು. ಬೆಂಕಿ ತಗುಲುವ ವೇಳೆ ಅದರಲ್ಲಿ ಏಳು ಮಂದಿ ಹೊರಬಂದಿದ್ದು, ನಂತರ ಇಬ್ಬರು ಒಳಗೆ ಇರುವುದು ಗಮನಕ್ಕೆ ಬಂದಿದೆ.
ಅಗ್ನಿ ಅವಘಡದ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿ ಬೆಂಕಿಯನ್ನು ನಂದಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.