ಸ್ಕೌಟ್ಸ್ ಮಕ್ಕಳಿಗೆ ಸಮವಸ್ತ್ರ ಕೊಡುಗೆ.

Share with

ಬಂಟ್ವಾಳ : ಮಕ್ಕಳು ಕೇವಲ ಪಠ್ಯಕ್ಕೆ ಸಂಬಂಧಿಸಿದಂತೆ ಕಲಿಕೆ ಮಾಡುವ ಜೊತೆಗೆ ಪಠ್ಯೇತರವಾಗಿ ಸ್ಕೌಟ್ಸ್ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಜೀವನ ಕೌಶಲಗಳ ಬಗ್ಗೆ ಅನುಭವವನ್ನು ಪಡೆಯುತ್ತಾರೆ ಇಂತಹ ಕಲಿಕೆಯು ಭದ್ರವಾಗಿ ಸೇವಾಪರತೆಯನ್ನು ಬೆಳೆಸುತ್ತದೆ, ಈ ರೀತಿಯ ಕಲಿಕೆಯು ಬೆಳೆಯಲು ಸ್ಕೌಟ್ ಸಂಸ್ಥೆ ಪೂರಕವಾಗಿ ಕೆಲಸ ಮಾಡುತ್ತಿದೆ.

ಇದರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಉಚಿತ ಸಮವಸ್ತ್ರ ವನ್ನು ವೀರಕಂಭ ಗ್ರಾಮಪಂಚಾಯತ್ ಉಪಾಧ್ಯಕ್ಷ ರಾದ ಶ್ರೀಯುತ ಜನಾರ್ದನ ಪೂಜಾರಿ ಯವರು ಬಂಟ್ವಾಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿನ ಸ್ಕೌಟ್ ಮಕ್ಕಳಿಗೆ ಒದಗಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಯುತರು ತಮ್ಮ ಪಂಚಾಯತಿನ ಉಪಾಧ್ಯಕ್ಷ ಸ್ಥಾನದ ಪದಗ್ರಹಣ ಕಾರ್ಯಕ್ರಮವನ್ನು ಸರಳವಾಗಿ ಮಾಡಿ ಅದಕ್ಕಾಗುವ ಖರ್ಚನ್ನು ಶಾಲಾ ಮಕ್ಕಳ ಸೇವೆಗೆ ನೀಡಿರುವುದು ಪ್ರಸಂಶನೀಯವಾಗಿದೆ. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ,ಶಾಲಾ ಸ್ಕೌಟ್ ಕ್ಯಾಪ್ಟನ್ ಶಿಕ್ಷಕಿ ಸಂಗೀತ ಶರ್ಮ ಪಿ ಜಿ, ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *