ಮಂಗಳೂರು: ನಗರದ ಕಟ್ಟಡವೊಂದನ್ನು ಬಾಡಿಗೆಗೆ ನೀಡುವ ನೆಪದಲ್ಲಿ ತಾನೇ ಕಟ್ಟಡದ ಮಾಲೀಕ ಎಂದು ಸುಳ್ಳು ಬಾಡಿಗೆ ಕರಾರು ಪತ್ರ ಮಾಡಿ 1,14,10,000 ರೂಪಾಯಿ ವಂಚನೆ ಮಾಡಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ನಗರದ ಮಠದಕಣಿಯಲ್ಲಿರುವ ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಕಟ್ಟಡದಲ್ಲಿ 40 ಲಕ್ಷ ರೂಪಾಯಿ ಮುಂಗಡ ಠೇವಣಿಯನ್ನಿಟ್ಟು, ತಿಂಗಳಿಗೆ 10 ಲಕ್ಷ ರೂಪಾಯಿ ಬಾಡಿಗೆಯಂತೆ ತಾನು ಮಹೇಶ್ ಫೌಂಡೇಶನ್ ಸಂಸ್ಥೆಯನ್ನು ಸ್ಥಾಪಿಸಿದ್ದೆ.

ಈ ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ರಾಮ್ ಮೋಹನ್ ರೈ ಎಂಬಾತ ತನಗೆ 2021 ಸೆ.30ರಂದು ಬಾಡಿಗೆ ಕರಾರಿನಂತೆ 30 ವರ್ಷಗಳಿಗೆ ಬಾಡಿಗೆಗೆ ನೀಡಿದ್ದರು. ರಾಮ್ ಮೋಹನ್ ರೈ ಗುರುದೇವ ಎಜುಕೇಶನ್ ಫೌಂಡೇಶನ್ ಸಂಸ್ಥೆ ನಡೆಸುತ್ತಿದ್ದು, ಗ್ಲೋಬಲ್ ಆಸ್ಪತ್ರೆಯ ಮಾಲಕ ತಾನೆಂದು ನಂಬಿಸಿದ್ದ.
ಅದರಂತೆ ತಾನು ಮಾಸಿಕ 10 ಲಕ್ಷದಂತೆ 70.16 ಲಕ್ಷ ರೂಪಾಯಿ ಬಾಡಿಗೆ ನೀಡಿದ್ದೆ. ಆದರೆ ಗ್ಲೋಬಲ್ ಕಟ್ಟಡದ ನಿಜವಾದ ಮಾಲಕ ಡಾ| ಸುಶೀಲ್ ಮತ್ತು ಸುದರಾಮ್ ರೈ ಎಂದು ತನಗೆ ಮತ್ತೆ ತಿಳಿಯಿತು. ಇದರಿಂದ ರಾಮ್ ಮೋಹನ್ ರೈ ತನಗೆ 1,14,10,000 ರೂಪಾಯಿ ವಂಚನೆ ಮಾಡಿರುವುದಾಗಿ ರತೀಶ್ ಬಿ.ಎನ್ ಎಂಬವರು ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.