ಬಂಟ್ವಾಳ: ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಸಜಿಪ ಮುನ್ನೂರು ಗ್ರಾಮದ ಉದ್ದೊಟ್ಟು ಎಂಬಲ್ಲಿಂದ ನಾಪತ್ತೆಯಾಗಿದ್ದ ಯುವ ಜೋಡಿಯನ್ನು ಪೊಲೀಸರು ಕೇರಳದಲ್ಲಿ ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಪುತ್ರಿ ಆಯಿಸತ್ ರಸ್ಮಾ (18) ಮತ್ತು ಹೈದರ್ ಎಂಬವರ ಪುತ್ರ ಮುಹಮ್ಮದ್ ಸಿನಾನ್ (23) ನ.23ರಂದು ಮನೆಯಿಂದ ಕಾಣೆಯಾಗಿದ್ದರು ಎಂದು ದೂರು ದಾಖಲಾಗಿತ್ತು.
ಬಂಟ್ವಾಳ ನಗರ ಠಾಣಾ ನಿರೀಕ್ಷಕ ಅನಂತ ಪದ್ಮನಾಭ ಅವರ ನಿರ್ದೇಶನದಂತೆ ಠಾಣಾಧಿಕಾರಿ ಎಸ್.ಐ ರಾಮಕೃಷ್ಣ ನೇತೃತ್ವದ ತಂಡವು ನಾಪತ್ತೆಯಾದ ಯುವ ಜೋಡಿಯನ್ನು ಕೇರಳ ರಾಜ್ಯದ ಕಾಂಞಗಾಡ್ ನಲ್ಲಿ ಪತ್ತೆ ಹಚ್ಚಿ, ಇವರನ್ನು ನ.28ರಂದು ಬಂಟ್ವಾಳ ನಗರ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಯುವಕ ಮತ್ತು ಯುವತಿ ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ನಾವು ಮದುವೆಯಾಗುವುದಾಗಿ ಹೇಳಿದ್ದು ಬಳಿಕ ಯುವತಿಯನ್ನು ಯುವಕನ ಜೊತೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.