ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಜೋಡುಕಲ್ಲು-ಪರಂಬಳ ಲೊಕೋಪಯೋಗಿ ಇಲಖೆಗೆ ಸೇರಿದ ರಸ್ತೆ ಹದಗೆಟ್ಟು ಶೋಚನೀಯವಸ್ಥೆಯಲ್ಲಿದ್ದು, ಸಂಚಾರ ದುಸ್ಥರವಾಗಿರುವುದಾಗಿ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದೆ.
ಸುಮಾರು 4 ಕಿಲೋ ಮೀತರ್ ಉದ್ದದ ರಸ್ತೆಯಲ್ಲಿ ಮೂರು ಕಿಲೋ ಮೀಟರ್ ರಸ್ತೆ ಅಲ್ಲಲ್ಲಿ ಶೋಚನೀಯವಸ್ಥೆಗೆ ತಲುಪಿದೆ. ಡಾಮಾರು ಕಿತ್ತೋಗಿ ಜಲ್ಲಿಕಲ್ಲುಗಳು ಎದ್ದು ಹೊಂಡ ಸೃಷ್ಟಿಯಾಗಿ ತೀರಾ ಶೋಚನೀಯವಸ್ಥೆಗೆ ತಲುಪಿದೆ. ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.
ಜೊಡುಕಲ್ಲುನಿಂದ ಪರಂಬಳ ಸಹಿತ ವಿವಿಧ ಕಡೇ ಸಂಚಾರಕ್ಕೆ ಹತ್ತಿರದ ರಸ್ತೆ ಇದಾಗಿದೆ. ದಿನನಿತ್ಯ ಭಾರೀ ಪ್ರಮಾಣದಲ್ಲಿ ವಾಹನಗಳು ಸಂಚಾರ ನಡೆಸುತ್ತಿದೆ. ಮಸೀದಿ, ದೇವಸ್ಥಾನ, ಚರ್ಚ್ಗಳು ಹೊಂದಿರುವ ಪ್ರದೇಶವಾಗಿದೆ. ಹಲವು ವರ್ಷಗಳಿಂದ ಈ ರಸ್ತೆ ಶೋಚನೀಯವಸ್ಥೆಯಲ್ಲಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ವರ್ಗ ಕೂಡಲೇ ಈ ರಸ್ತೆಯ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.