ಅಕ್ಷಯ ಕಾಲೇಜಿನಲ್ಲಿ “ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ದತ್ತಿ ನಿಧಿ- 2015” ಉಪನ್ಯಾಸ ಕಾರ್ಯಕ್ರಮ

Share with

ಪುತ್ತೂರು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು, ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ಅಕ್ಷಯ ಕಾಲೇಜಿನ ಅದ್ವಯ ಸಾಹಿತ್ಯ ಸಂಘ ಮತ್ತು ರೊಟ್ರ್ಯಾಕ್ಟ್ ಕ್ಲಬ್ -ಅಕ್ಷಯ ಕಾಲೇಜು ಪುತ್ತೂರು ಸಹಾಭಾಗಿತ್ವದಲ್ಲಿ “ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ದತ್ತಿ ನಿಧಿ- 2015” ಉಪನ್ಯಾಸ ಕಾರ್ಯಕ್ರಮವು ಅಕ್ಷಯ ಕಾಲೇಜಿನಲ್ಲಿ ಸಂಪನ್ನಗೊಂಡಿದೆ.

"ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ದತ್ತಿ ನಿಧಿ- 2015" ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕ ಜಯಂತ್ ನಡುಬೈಲ್.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದ ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕ ಜಯಂತ್ ನಡುಬೈಲ್ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ವ್ಯಕ್ತಪಡಿಸಿದರು. ಸಭಾಪತಿ ರೊಟ್ರ್ಯಾಕ್ ಕ್ಲಬ್ ಅಕ್ಷಯ ಕಾಲೇಜು ಪುತ್ತೂರು ರತ್ನಾಕರ ರೈ ಇವರು ಮಾತನಾಡಿ ಯಾವುದೇ ಭಾಷೆಯ ಬೆಳವಣಿಗೆಗೆ ಸಾಹಿತ್ಯವೇ ಕಾರಣ. ಅಧ್ಯಕ್ಷರ ನೆಲೆಯಲ್ಲಿ ಪುತ್ತೂರಿನ ಕ.ಸಾ.ಪ. ನ ಅಧ್ಯಕ್ಷರಾಗಿರುವ, ಪುತ್ತೂರು ಉಮೇಶ್ ನಾಯಕ್ ರವರು ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಉಂಟಾಗಲು ಸಾಹಿತ್ಯ ಪ್ರಮುಖ ಘಟ್ಟಗಳು ಪಾತ್ರವಹಿಸುತ್ತವೆ ಹಾಗೂ ಅನುವಾದ ಸಾಹಿತ್ಯದಿಂದ ಕನ್ನಡ ಸಾಹಿತ್ಯದ ಕಾರ್ಯವು ಪ್ರಾರಂಭವಾಯಿತು ಎಂದು ಹೇಳಿದರು.

ಡಿ. ಆರ್.ಡಿ.ಓ ಕೇಂದ್ರ ರಕ್ಷಣಾ ಸಂಶೋಧನಾ ಇಲಾಖೆಯ ಅಧಿಕಾರಿ ಜಯಪ್ರಕಾಶ್ ಇವರನ್ನು ಸನ್ಮಾನಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಲೇಖಕ, ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಮರ್ಖಾಧಿಕಾರಿ ಡಿ. ಆರ್.ಡಿ.ಓ ಕೇಂದ್ರ ರಕ್ಷಣಾ ಸಂಶೋಧನಾ ಇಲಾಖೆಯ ಅಧಿಕಾರಿ ಜಯಪ್ರಕಾಶ್ ಇವರನ್ನು ಸನ್ಮಾನಿಸಲಾಯಿತು. ಹಾಗೂ ಇವರಿಂದ ಅನುವಾದ ಸಾಹಿತ್ಯ ಬಗ್ಗೆ ಉಪನ್ಯಾಸ ಕಾರ್ಯಾಗಾರ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ ಎ, ರೊಟ್ರ್ಯಾಕ್ ಕ್ಲಬ್ ನ ಸಯೋಂಜಕ ಉಪನ್ಯಾಸಕ ರಾಕೇಶ್ ರೊಟ್ರ್ಯಾಕ್ ಕ್ಲಬ್ ಅಕ್ಷಯ ಕಾಲೇಜಿನ ಸತ್ಯನಾರಾಯಣ ನಾಯಕ್ ಉಪಸ್ಥಿತಿಯಲ್ಲಿದ್ದರು.

ಅದ್ವಯ-ಸಾಹಿತ್ಯ ಸಂಘದ ಮುಖ್ಯಸ್ಥ ಶ್ರೀ ಹರಿಶ್ಚಂದ್ರ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳ್ನಾಡಿದರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಪಶುಪತಿ ಶರ್ಮ ಇವರು ಶಾಲು ಮತ್ತು ಸ್ಮರಣಿಕೆ ನೀಡಿ ಸ್ವಾಗತಿಸಿದರು. ಉಜ್ವಲ್ ನಾಯಕ್ ರವರು ವಂದಿಸಿದರು. ಕೀರ್ತನ್ ಕಾರ್ಯಕ್ರಮವನ್ನು ನಿರೂಪಿಸಿದರು. ಸವಿ ಡೇಚಮ್ಮ ಕಾರ್ಯಕ್ರಮ ನಿರ್ವಹಿಸಿದರು.


Share with

Leave a Reply

Your email address will not be published. Required fields are marked *