ಧರ್ಮತ್ತಡ್ಕ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ನವೆಂಬರ್ 7 ರಿಂದ 10ರ ತನಕ ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯಲ್ಲಿ ನಡೆದಿದ್ದು ಈ ಕಲೋತ್ಸವದ ಯಶಸ್ವಿಗೆ ಸಹಕರಿಸಿದ ಸಂಘ ಸಂಸ್ಥೆಗಳನ್ನು ಗೌರವಿಸುವ ಕಾರ್ಯಕ್ರಮವು ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಕುಡಾಲು ವಹಿಸಿದರು. ಶಾಲಾ ಪ್ರಾಂಶುಪಾಲರಾದ ರಾಮಚಂದ್ರ ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ , ಪೈವಳಿಕೆ ಪಂಚಾಯತ್ ಸದಸ್ಯ ಅಶೋಕ್ ಭಂಡಾರಿ, ಎಯುಪಿ ಶಾಲಾ ಮ್ಯಾನೇಜರ್ ವಿಜಯಶ್ರೀ ಬಿ ಮತ್ತು ಹಿರಿಯ ಅಧ್ಯಾಪಕ ರಾಮ್ ಮೋಹನ್ ಸಿ ಯಚ್. ಸಂಘ ಸಂಸ್ಥೆಗಳನ್ನು ಅಭಿನಂದಿಸಿದರು.
ಸತೀಶ್ಚಂದ್ರ ಭಂಡಾರಿ ಕೋಳಾರು, ಶಂಕರ ರಾವ್ ಕಕ್ವೆ, ಜಾನ್ ಡಿಸೋಜಾ, ಅಶ್ರಫ್ ಸೋಕೆ, ಗೋವಿಂದ ಭಟ್ ಕನಿಯಾಲ, ಕೃಷ್ಣ ಕಿಶೋರ್ ಮೊದಲಾದವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಹಕರಿಸಿದ 45 ಸಂಘ ಸಂಸ್ಥೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘ ಸಂಸ್ಥೆಗಳ ಹೆಸರುಗಳನ್ನು ಉಣ್ಣಿಕೃಷ್ಣನ್ ಮತ್ತು ನಿವೇದಿತಾ ವಾಚಿಸಿದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ . ಗೋವಿಂದ ಭಟ್ ಸ್ವಾಗತಿಸಿ ಎಯುಪಿ ಶಾಲಾ ಮುಖ್ಯೋಪಾಧ್ಯಾಯರಾದ ಮಹಾಲಿಂಗ ಭಟ್ ವಂದಿಸಿದರು. ಕಾರ್ಯಕ್ರಮ ಶಾಲಾ ಅಧ್ಯಾಪಿಕೆಯರು ಪ್ರಾರ್ಥಿಸಿದರು. ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.