ಮಂಜೇಶ್ವರ: ಮೀನು ಕಾರ್ಮಿಕ ಮನೆಯಿಂದ ನಿಗೂಡವಾಗಿ ನಾಪತ್ತೆಗೊಂಡು ಇಂದಿಗೆ 13 ದಿನ ಕಳೆದರೂ ಇನ್ನೂ ನಾಪತ್ತೆಯಾಗದಿರುವುದು ಕುಟುಂಬ ಹಾಗೂ ಸ್ನೇಹಿತರನ್ನು ಆತಂಕದ ಸ್ಥಿತಿಗೆ ಕೊಂಡೊಯ್ಯುತ್ತಿದೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆಯ ನಿವಾಸಿ ಮೀನು ಕಾರ್ಮಿಕರಾದ ರೋಷನ್ ಮೊಂತೆರೋ [42] ಈ ತಿಂಗಳ ೧೮ರಂದು ಸುಮಾರು 11.45ರ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು.
ಈ ಬಗ್ಗೆ ಪತ್ನಿ ರೇಖ ಮೊಂತೆರೋ ಮಂಜೇಶ್ವರ ಪೋಲೀಸರಿಗೂ ದೂರು ನೀಡಿ ಕೇಸು ದಾಖಲಿಸಿದ್ದರು. ಇವರು ನಾಪತ್ತೆಯಾಗುವ ಸಂದರ್ಭದಲ್ಲಿ ವಾಚ್, ಪರ್ಸ್, ಮೊಬೈಲ್, ಉಂಗುರು ಮನೆಯಲ್ಲಿಟ್ಟಿದ್ದರು. ಆರಂಭದಲ್ಲಿ ಸಂಬಂಧಿಕರು, ಸ್ನೇಹಿತರು, ಊರವರು, ಕೋಸ್ಟಲ್ ಪೋಲೀಸರು ತಲಪಾಡಿ ಸಹಿತ ಮಂಜೇಶ್ವರ ಪರಿಸರ ಪ್ರದೇಶದ ಸಮುದ್ರ, ಕೆರೆ, ಬಾವಿ ಮೊದಲಾದ ಕಡೇಗಳಲ್ಲಿ ಹುಡುಕಾಡಿದ್ದು, ಯಾವುದೇ ಸುಳಿವು ಲಭಿಸಲಿಲ್ಲ.
ಬಳಿಕ ಮಂಜೇಶ್ವರ ಪೋಲೀಸರ ನೇತೃತ್ವದಲ್ಲಿ ಕೂಡಾ ಶ್ವಾನ ದಳ ತಲುಪಿ ಮನೆ ಸಹಿತ ಪರಿಸರದಲ್ಲಿ ಹುಡುಕಾಡಿದ್ದು, ಯಾವುದೇ ಮಾಹಿತಿ ಲಭಿಸಲಿಲ್ಲ. ಮನೆ ಪರಿಸರದ ಕಟ್ಟಡದಲ್ಲಿರುವ ಸಿಸಿ ಕ್ಯಾಮರದಲ್ಲೂ ಇವರ ದೃಶ್ಯ ಪತ್ತೆಯಾಗಲಿಲ್ಲ. ಇವರ ನಿಗೂಡ ನಾಪತ್ತೆ ಪತ್ನಿ, ಶಾಲಾ ವಿಧ್ಯಾರ್ಥಿಗಳಾದ ಎರಡು ಮಕ್ಕಳು ಹಾಗೂ ಸ್ನೇಹಿತರು, ಊರವರಲ್ಲಿ ಸಂಕಷ್ಟದ ಸ್ಥಿತಿ ಉಂಟಾಗಿದೆ.
ರೋಷನ್‌ರಿಗೆ ಅಲ್ಪ ಸ್ವಲ್ಪ ಸಾಲವಿರುವುದಾಗಿ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೇರೆ ಹೋಗಿರಬಹುದೆ ಹೋಗಿದ್ದರೆ ಪೋನ್ ಕರೆಯಾದರೂ ಯಾಕೆ ಮಾಡಲಿಲ್ಲವೆಂದು ಎಂದು ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ಪ್ರಶ್ನೆಯಾಗಿದೆ. ಪೋಲೀಸರು ಸ್ನೇಹಿತರು ರೋಷನ್ ರವರ ಪತ್ತೆಯಾಗಿ ಶ್ರಮವಹಿಸುತ್ತಿದ್ದಾರೆ. ಸಂಬಂಧಪಟ್ಟ ಪೋಲೀಸ್ ಅಧಿಕಾರಿಗಳು ಇವರನ್ನು ಪತ್ತೆಹಚ್ಚಿ ಕೊಡಬೇಕೆಂದು ಸಂಬಂಧಿಕರು ಒತ್ತಾಯಿಸಿದ್ದಾರೆ.