ಪೈವಳಿಕೆ: ಪ್ಲಾಸ್ಟಿಕ್ ತ್ಯಾಜ್ಯ ಉಪೇಕ್ಷಿಸಿ ಬಳಿಕ ಅದನ್ನು ಉರಿಸುವ ಕೃತ್ಯ ನಡೆಸುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಾಯಾರುಪದವು ಅಕ್ಷಯ ಕೇಂದ್ರ ಸಹಿತ ವ್ಯಾಪಾರ ಸಂಸ್ಥೆ ಹೊಂದಿರುವ ಸಮೀಪದಲ್ಲೇ ಖಾಸಗಿ ವ್ಯಕ್ತಿಯ ಖಾಲಿ ಸ್ಥಳದಲ್ಲಿ ಭಾರೀ ಪ್ರಮಾಣದ ತ್ಯಾಜ್ಯವ್ಬನ್ನು ರಾತ್ರಿ ಹೊತ್ತಲ್ಲಿ ಉಪೇಕ್ಷಿಸಿ ಅದನ್ನು ಉರಿಸುವ ಕೃತ್ಯ ನಡೆಸುತ್ತಿರುವುದಾಗಿ ಸ್ಥಳಿಯರು ದೂರಿದ್ದಾರೆ.
ಸಮಾರಂಭಗಳ ಆಹಾರ ತ್ಯಾಜ್ಯ ಸಹಿತ ಪ್ಲಾಸ್ಟಿಕ್ ತ್ಯಾಜ್ಯಗಳು ಹಿತ್ತಿಲಿನಲ್ಲಿ ಹರಡಿಕೊಂಡಿದ್ದು ದುರ್ವಾಸನೆಗೆ ಕಾರಣವಾಗುತ್ತಿರುವುದಾಗಿ ದೂರಲಾಗಿದೆ. ಕೆಲವೊಮ್ಮೆ ಅದನ್ನು ಉರಿಸಲಾಗುತ್ತಿದೆ. ಇದರಿಂದ ಮಾರಕ ರೋಗ ಉಂಟಾಗುವ ಭೀತಿ ಜನರನ್ನು ಕಾಡುತ್ತಿದೆ. ಸಂಬಂಧಪಟ್ಟ ಪಂಚಾಯತ್ ಅಧಿಕೃತರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳ ಸಂದರ್ಶಿಸಿ ತ್ಯಾಜ್ಯ ತೆರವುಗೆ ಕ್ರಮಕೈಗೊಳ್ಳಬೇಕು, ಅಲ್ಲದೆ ಉಪೇಕ್ಷಿಸುವವರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.