ಬಂಟ್ವಾಳ: ಗ್ರಾಮಭಿವೃದ್ಧಿ ಯೋಜನೆ ತುಂಬೆ ವಲಯ ವ್ಯಾಪ್ತಿಗೆ ಒಳಪಟ್ಟ ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ನೂತನ ಸಮುದಾಯ ಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 3 ಲಕ್ಷ ಮಂಜೂರು ಗೊಂಡಿದ್ದು ಇದರ ಮಂಜೂರಾತಿ ಪತ್ರವನ್ನು ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಆನಂದ ಸುವರ್ಣರವರು ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನಕ್ಕೆ ಭೇಟಿ ನೀಡಿ ಪ್ರತಿಷ್ಠಾನದ ಕೆಲಸ ಕಾರ್ಯಗಳಾದ ಔಷಧಿ ದಾನ, ವಿದ್ಯಾ ದಾನ, ರಾಷ್ಟ್ರೀಯ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನ, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವ ರೀತಿ ಈ ಬಗ್ಗೆ ಅಭಿನಂದಿಸುತ್ತಾ ಮುಂದಿನ ದಿನಗಳಲ್ಲೂ ಈ ಸಂಸ್ಥೆ ಈ ಗ್ರಾಮದ ಎಲ್ಲಾ ಸದಸ್ಯರಿಗೂ ಪ್ರಯೋಜನಕಾರಿಯಾಗಲಿ, ಈ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿ ಸೇವಾಂಜಲಿ ಟ್ರಸ್ಟಿ ಕೃಷ್ಣಕುಮಾರ್ ಪೂಂಜರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಗ್ರಾಮಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ, ಕೇಂದ್ರ ಕಚೇರಿಯ ಸಮುದಾಯ ಅಭಿವೃದ್ಧಿ ವಿಭಾಗದ ಯೋಜನಾಧಿಕಾರಿ ಪುಷ್ಪರಾಜ್, ವಲಯದ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಸದಾನಂದ ಆಳ್ವ ಕಂಪ, ತುಂಬೆ ವಲಯ ಮೇಲ್ವಿಚಾರಕಿ ಮಮತಾ, ಸುಜೀರ್ ಮತ್ತು ಪರಂಗಿಪೇಟೆ ಸೇವಾ ಪ್ರತಿನಿಧಿಗಳಾದ ಮಲ್ಲಿಕಾ ಮತ್ತು ಅಮಿತಾ, ಪರಂಗಿಪೇಟೆ ವಿ ಎಲ್ ಈ ಸವಿತಾ, ಪರಂಗಿಪೇಟೆ ಒಕ್ಕೂಟದ ಅಧ್ಯಕ್ಷ ಸುಕೇಶ್ ಶೆಟ್ಟಿ, ತುಂಬೆ ವಲಯ ಅಧ್ಯಕ್ಷ ಲೀಡಿಯಾ ಪಿಂಟೋ, ಪದಾಧಿಕಾರಿಗಳಾದ ಮನೋಹರ ನಾಯ್ಕ್, ಸಂದೀಪ್ ಸುಜೀರ್, ಚಂದ್ರಹಾಸ ತುಂಬೆ, ಹಾಗೂ ಸೇವಾಂಜಲಿ ಟ್ರಸ್ಟಿಯ ಸದಸ್ಯರುಗಳಾದ ಭಾಸ್ಕರ ಚೌಟ, ನಾರಾಯಣ, ಸುಕುಮಾರ್ ಸಿ ಡಿ ಮೆಡಿಕಲ್, ಪ್ರಶಾಂತ್ ತುಂಬೆ, ಜಯರಾಮ್ ಅರ್ಕುಳ, ಶಿವರಾಜ್ ಸುಜೀರ್, ಕೇಶವ ದೋಟ, ಪದ್ಮನಾಭ ಕಿದೆ ಬೆಟ್ಟು, ಪ್ರಕಾಶ್ ಕಿದೆ ಬೆಟ್ಟು, ಗಿರೀಶ್ ಪದೇಂಜರ್, ಇವರುಗಳು ಉಪಸ್ಥಿತರಿದ್ದರು.