ರಾಯಿ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘ ರಾಯಿ ಕೊಯಿಲ ಅರಳ ಇದರ ನೂತನ ಸಮುದಾಯ ಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಭವನ ನಿಧಿಯಿಂದ 3ಲಕ್ಷದ ಚೆಕ್ ಅನ್ನು ಸಮುದಾಯ ಅಭಿವೃದ್ಧಿ ವಿಭಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದೀ ಯೋಜನೆ ಪ್ರಾದೇಶಿಕ ನಿರ್ದೇಶಕರು ಆನಂದ ಸುವರ್ಣ ಸಂಘದ ಅಧ್ಯಕ್ಷ ಶೇಖರ್ ಅಂಚನ್ ಪಿಲ್ಕಾಜೆಗುತ್ತು ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ, ಧ ಗ್ರಾ ಯೋ ಜಿಲ್ಲಾ ನಿರ್ದೇಶಕರು ಮಹಾಬಲ ಕುಲಾಲ್, ಯೋಜನಾಧಿಕಾರಿ ಮಾಧವ ಗೌಡ, ಮೇಲ್ವಿಚಾರಕರು ಶಿವರಂಜನ್, ಸೇವಾ ಪ್ರತಿನಿಧಿ ಶ್ರೀಮತಿ ಶ್ಯಾಮಲ, ರಾಘವೇಂದ್ರ ಭಟ್ ಹಾಗೂ ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ರಾಯಿ ಬೆಟ್ಟು, ಕೋಶಾಧಿಕಾರಿ ರಮೇಶ್ ಹೊಸ ಮನೆ, ಸಂಘಟನಾ ಕಾರ್ಯದರ್ಶಿ ದಿನೇಶ್ ಸುವರ್ಣ, ಯೋಗೀಶ್ ಕೊಯಿಲ, ಆನಂದ ಪೂಜಾರಿ, ಪರಮೇಶ್ವರ ಪೂಜಾರಿ, ಗೋಪಾಲ ಜಿಕೆ ಉಪಸ್ಥಿತರಿದ್ದರು.