ಬಂಟ್ವಾಳ: ಬಹುಬೇಡಿಕೆಯ ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಯೋಜನೆಯು ಕನ್ಯಾನ ಗ್ರಾಮದಲ್ಲಿ ಅನುಷ್ಠಾನಗೊಂಡಿದ್ದು, ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿರುವ ಕುಟುಂಬಗಳ ಮನೆಯಿಂದ ಹಾಗೂ ವಾಣಿಜ್ಯ ಕಟ್ಟಡಗಳಿಂದ ಒಣ ಕಸದ ವಿಲೇವಾರಿ ಯೋಜನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ರಮೇಶ್ ಪಂಜಾಜೆ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪಂಚಾಯತ್ ಸದಸ್ಯರಾದ ಗಣೇಶ ಭಟ್ ನೀರ್ಪಾಜೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ, ಸಂಜೀವಿನಿ ಸಂಘದ ಎಂ.ಬಿ.ಕೆ ಮಮತಾ ಬಂಡಿತ್ತಡ್ಕ, ಎಲ್. ಸಿ. ಆರ್.ಪಿ.ಹೇಮಲತಾ, ಸಂಜೀವಿನಿ ಘಟಕ ಸದಸ್ಯ ಶಾರದಾ, ಘಟಕದ ಚಾಲಕರು ದುರ್ಗಲಕ್ಷೀ, ಸಹಾಯಕಿ ಮೋಹಿನಿ ಚೆನ್ನಯಮೂಲೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.