ಮಂಜೇಶ್ವರ: ನಿಲ್ಲಿಸಿದ್ದ ಆಂಬುಲೈನ್ಸ್ ಕಳವುಗೈದು ಸಾಗಿಸುತ್ತಿದ್ದ ವೇಳೆ ಖಾಸಗಿ ವ್ಯಕ್ತಿಯ ಆವರಣ ಗೋಡೆಗೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಆರೋಪಿ ಪೊಲೀಸರ ಸೆರೆಗೀಡಾದ ಘಟನೆ ನಡೆಯಿತು.
ಉಪ್ಪಳ ಬಳಿಯ ಪತ್ವಾಡಿ ನಿವಾಸಿ ಮೊಹಮ್ಮದ್ ನೌಫಲ್ ಯಾನೆ ಸವಾದ್ (21) ಎಂಬಾತ ನನ್ನು ಮಂಜೇಶ್ವರ ಠಾಣೆಯ ಎಸ್ ಐ ನಿಖಿಲ್ ಹಾಗೂ ತಂಡ ಸೆರೆ ಹಿಡಿದಿದ್ದಾರೆ. ಡಿ.1ರಂದು ಸಂಜೆ ಪಚ್ಚಲಂಪಾರೆ ನಿವಾಸಿ ಮೊಹಮ್ಮದ್ ರಿಯಾಜ್ ಎಂಬವರು ತನ್ನ ಆಂಬುಲೆನ್ಸ್ ನ್ನು ಉಪ್ಪಳ ಪೇಟೆಯಲ್ಲಿರುವ ಖಾಸಗಿ ಆಸ್ಪತ್ರೆಯ ಬಳಿಯಲ್ಲಿ ನಿಲ್ಲಿಸಿ ತೆರಳಿದ್ದರು.
ಅಲ್ಪ ಹೊತ್ತಿನಲ್ಲಿ ಮರಳಿ ಬಂದಾಗ ಆಂಬುಲೆನ್ಸ್ ನಾಪತ್ತೆಯಾಗಿತ್ತು ಕೂಡಲೇ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು, ಪೊಲೀಸರು ಹುಡುಕಾಟಕ್ಕೆ ಆರಂಬಿಸಿದ್ದರು. ಇದೇ ವೇಳೆ ಈ ಆಂಬುಲೆನ್ಸ್ ಆರೋಪಿ ಕೊಂಡು ಹೋಗುತ್ತಿದ್ದ ವೇಳೆ ಬಡಾಜೆ ಚೌಕಿ ರಸ್ತೆಯಲ್ಲಿ ಉದಯಶೆಟ್ಟಿ ಎಂಬವರ ಆವರಣ ಗೋಡೆಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಅಲ್ಲಿನ ನಾಗರಿಕರು ಅಂಬುಲೆನ್ಸ್ ಚಲಾಯಿಸುತ್ತಿದ್ದ ಮೊಹಮ್ಮದ್ ನೌಫಲ್ ನ್ನು ಹಿಡಿದಿಟ್ಟು ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ತಲುಪಿದ ಪೊಲೀಸರು ಆಂಬುಲೆನ್ಸ್ ನ್ನು ಕಷ್ಟ ಡಿಗೆ ತೆಗೆದು ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಈತನ ವಿರುದ್ಧ ಈ ಹಿಂದೆ ಆಟೋರಿಕ್ಷ ಕಳ್ಳ ಪ್ರಕರಣ ದಾಖಲಾಗಿರುದಾಗಿ ಪೊಲೀಸರು ತಿಳಿಸಿದ್ದಾರೆ.