ಉಪ್ಪಳ: ಬಂದ್ಯೋಡು ಅಡ್ಕ ನಿವಾಸಿ ಬಾಯಿಕಟ್ಟೆ ಕೋರಿಕಾರ್ ತರವಾಡಿನ ಮೂಲಸ್ಥಾನಿ ಧಾರ್ಮಿಕ ಮುಂದಾಳು ಸುಂದರ ಬೆಳ್ಚಾಡ [90] ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಮಕ್ಕಳಾದ ಹರಿಣಾಕ್ಷಿ, ಚಂಚಲಾಕ್ಷಿ, ಗಣೇಶ, ಪುಷ್ಪಾವತಿ, ಶರ್ಮಿಳ, ಅಳಿಯಂದಿರಾದ ಜನಾರ್ಧನ, ರಮೇಶ, ರಾಜೇಶ್, ಕಿರಣ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಶ್ರೀ ವಿಷ್ಣುಮೂರ್ತಿ ತರವಾಡು ಕೋರಿಕಾರ್ ಮೀಂಜಾ, ಬೋಲ್ನಾಡು ಶ್ರೀ ಭಗವತೀ ಕ್ಷೇತ್ರ, ಉಪ್ಪಳ ಶ್ರೀ ಭಗವತೀ ಕ್ಷೇತ್ರ ಸಮಿತಿ ಸಂತಾಪ ಸೂಚಿಸಿದೆ.