ಮಂಜೇಶ್ವರ: ಸಿಡಿಲು ಬಡಿದು ಮನೆ ಹಾನಿಗೊಂಡಿದ್ದು, ಮನೆಯವರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ನಡೆದಿದೆ. ವರ್ಕಾಡಿ ಪಂಚಾಯತ್‌ನ ಬೋಳಪದವುನ ದೇವಕಿ ಶೆಟ್ಟಿ ಎಂಬವರ ಮನೆಗೆ ಡಿ.9ರಂದು ರಾತ್ರಿ ಸಿಡಿಲು ಬಡಿದು ಹೆಂಚು ಹಾಸಿದ ಮನೆಯ ಗೋಡೆ ಬಿರುಕು ಬಿಟ್ಟು ಮನೆ ಹಾನಿಗೊಂಡಿದೆ.
ಇದರಿಂದ ಮನೆಯಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸ್ಥಳಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ, ನೇತಾರರಾದ ಸುಧಾಮ ಗೋಸಾಡ, ದೂಮಪ್ಪ ಶೆಟ್ಟಿ ತಾಮಾರು, ಯತೀರಾಜ್‌ಶೆಟ್ಟಿ ಕೆದುಂಬಾಡಿ, ಭಾಸ್ಕರ ಪೊಯ್ಯೆ, ಹರೀಶ್ ಕನ್ನಿಗೂಳಿ, ಪವನ್ ಬೋಳದಪದವು ಭೇಟಿ ನೀಡಿದ್ದಾರೆ.