ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯ ವತಿಯಿಂದ ಬಿಲ್ಲವ ಕ್ರೀಡಾಕೂಟ-2023

Share with

ಗೋಳ್ತಮಜಲು, ಬಾಳ್ತಿಲ, ವೀರಕಂಬ, ಅಮ್ಮ್ಟೂರು, ಬೋಳಂತೂರು, ಬೊಂಡಾಲ ಗ್ರಾಮಗಳನ್ನು ಒಳಗೊಂಡ ಬಿಲ್ಲವ ಸಮಾಜ ಸೇವಾ ಸಂಘ (ರಿ)ಕಲ್ಲಡ್ಕ ವಲಯ ವತಿಯಿಂದ ಬಿಲ್ಲವ ಕ್ರೀಡಾಕೂಟ-2023 ನೆರವೇರಿತು. ಕಲ್ಲಡ್ಕ ಸರ್ಕಾರಿ ಶಾಲಾ ಮೈದಾನದಲ್ಲಿ ಉದ್ಯಮಿ ಕಿಶೋರ್ ಕಟ್ಟೆಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಾಗಿರದೆ ನಮ್ಮ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ಮಾಜಿ ಸೈನಿಕರಾದ ಚಂದ್ರಶೇಖರ ಕ್ರೀಡಾಕೂಟಕ್ಕೆಶುಭ ಹಾರೈಸಿದರು.

ಉದ್ಯಮಿ ಕಿಶೋರ್ ಕಟ್ಟೆಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಲ್ಲಡ್ಕ ವಲಯ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೆಪೂಲಕೋಡಿ, ಗೊಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ, ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಎಳ್ತೀಮಾರ್, ನಾಗೇಶ್ ಪೂಜಾರಿ ಕರಿಂಗಣ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಇದರ ನಿರ್ದೇಶಕರಾದ ಲೋಕನಂದ ಎಳ್ತೀಮಾರ್, ವೀರಕಂಬ ಗ್ರಾಮ ಸಮಿತಿ ಅಧ್ಯಕ್ಷರಾದ ಜಯಪ್ರಕಾಶ್ ತೆಕ್ಕಿಪಪು, ಬೋಳಂತೂರು ಗ್ರಾಮ ಸಮಿತಿ ಅಧ್ಯಕ್ಷರಾದ ಆನಂದ ಪೂಜಾರಿ ಪ್ರಭುಗಳ ಬೆಟ್ಟು, ಕೃಷಿಕರಾದ ಜಯಂತ ಕಟ್ಟೆ ಮಾರ್, ಬೊಂಡಾಲ ಗ್ರಾಮ ಸಮಿತಿ ಅಧ್ಯಕ್ಷರಾದ ಯತಿನ್ ಕುಮಾರ್, ಮಂತ್ರ ದೇವತಾ ಸಾನಿಧ್ಯ ಕಟ್ಟೆಮಾರ್ ಧರ್ಮದರ್ಶಿ ಮನೋಜ್ ಕಟ್ಟೆ ಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚನ್ನಪ್ಪ ಕೋಟ್ಯಾನ್ ತೋಟ, ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾದ ಚಂದ್ರಶೇಖರ ಬಂಗೇರ, ಕಲ್ಲಡ್ಕ ವಲಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೊಸಕಟ್ಟ,ಸದಾಶಿವ ಬೊಂಡಾಲ, ಯುವ ವಾಹಿನಿ ಮಾಣಿ ಘಟಕ ಅಧ್ಯಕ್ಷರಾದ ರವಿಚಂದ್ರ, ಪ್ರಮುಖರಾದ ಹರೀಶ್ ಬಾಕಿಲ, ನಾಗೇಶ್ ಮಹಿಳಾ ಸಮಿತಿಯ ಅಧ್ಯಕ್ಷರಾದ ಪುಷ್ಪ ಸತೀಶ್ ದೇವಶ್ಯ ಉಪಸ್ಥಿತರಿದ್ದರು.

ಕ್ರೀಡಾಪಟುಗಳು ವಿವಿಧ ಕ್ರೀಡೆಗಳೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಂಡರು. ಶಂಕರ ಮಾಸ್ಟರ್ , ಹರೀಶ್ ಕೃಷ್ಣ ಕೊಡಿ, ಲೋಕೇಶ್ , ಶ್ರೀಧರ ರೋಹಿಣಿ, ಉಮಾವತಿ, ತೀರ್ಪುಗಾರರಾಗಿ ಸಹಕರಿಸಿದರು. ವಸಂತ ಟೈಲರ್ ನೇಟ್ಲ ಪ್ರಾರ್ಥಿಸಿ ವಸಂತ ಬಟ್ಟೀಹಿತ್ಲು ಸ್ವಾಗತಿಸಿ, ಯೋಗೇಶ್ ತೋಟ ಧನ್ಯವಾದ ಸಲ್ಲಿಸಿದರು. ಸಂತೋಷ್ ಕುಮಾರ್ ಬೊಳ್ಪೋಡಿ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *