ಪುತ್ತೂರು: ಈಗಾಗಲೇ ರಾಜ್ಯ ಸರಕಾರ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ಖಾತೆಗೆ ಜಮೆ ಮಾಡಲಾಗುತ್ತಿದೆ. ಮುಂದೆ ಕರಾವಳಿ ಭಾಗಕ್ಕೆ ಕುಚ್ಚಲಕ್ಕಿಯನ್ನೇ ಕೊಡಬೇಕು ಎಂದು ವಿಧಾನ ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಕರಾವಳಿ ಭಾಗಕ್ಕೆ ಕುಚ್ಚಲಕ್ಕೆ ಕೊಡಬೇಕು ಎಂಬ ಬೇಡಿಕೆಯನ್ನು ಮಾನ್ಯ ಮಾಡುತ್ತೇನೆ. ಕುಚ್ಚಲಕ್ಕಿ ಕೊಡಲು ಶಕ್ತಿ ಮೀರಿ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.