ಕರಂದಕ್ಕಾಡ್ ಶಿವಾಜಿನಗರ ಶ್ರೀ ವಿಶ್ವಕರ್ಮ ಯುವಕ ಸಂಘದ ಲೆಕ್ಕಪತ್ರ ಮಂಡನೆ ಸಭೆ

Share with

ಕಾಸರಗೋಡು: ಕರಂದಕ್ಕಾಡು ಶಿವಾಜಿನಗರ ಶ್ರೀ ವಿಶ್ವಕರ್ಮ ಯುವಕ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವದ ಲೆಕ್ಕಪತ್ರ ಮಂಡನೆ ಸಭೆ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ನಡೆಯಿತು.

ಶ್ರೀ ವಿಶ್ವಕರ್ಮ ಯುವಕ ಸಂಘದ ಲೆಕ್ಕಪತ್ರ ಮಂಡನೆ ಸಭೆ

ಯುವಕ ಸಂಘದ ಅಧ್ಯಕ್ಷ ಶೀತಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆರೆಮನೆ ವಸಂತ ಆಚಾರ್ಯ ವರದಿ ವಾಚಿಸಿದರು.

ಕೋಶಾಧಿಕಾರಿ ಎಡನೀರು ಸತ್ಯನಾರಾಯಣ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಭುವನೇಶ ಆಚಾರ್ಯ ತಾಳಿಪಡ್ಪುರವರು ವಿಶ್ವಕರ್ಮ ಪೂಜೆಯ ವರದಿ ಮತ್ತು ಲೆಕ್ಕಪತ್ರ ಪುಸ್ತಕದ ರೂಪದಲ್ಲಿ ಪ್ರಥಮವಾಗಿ ತಯಾರಿಸಿ ಪ್ರಸ್ತುತ ಪಡಿಸಿದನ್ನು ಪ್ರಶಂಶಿಸಿದರು. ಕಾರ್ಯದರ್ಶಿ ಗಣೇಶ ಆಚಾರ್ಯ ಕೊರಕೋಡು, ಕೋಶಾಧಿಕಾರಿ ಪ್ರವೀಣ್ ಕುಮಾರ್ ನಲ್ಕ, ಜತೆ ಕಾರ್ಯದರ್ಶಿ ವೇಣುಗೋಪಾಲ ಆಚಾರ್ಯ ನೆಕ್ರಾಜೆ, ಸಂಘದ ಹಿರಿಯ ಸದಸ್ಯರಾದ ಪೆರ್ನೆ ವಿಷ್ಣು ಆಚಾರ್ಯ, ಮನಮೋಹನ ತಾಳಿಪಡ್ಪು, ತುಕಾರಾಮ ಆಚಾರ್ಯ ಕೆರೆಮನೆ, ಹರೀಶ್ ಆಚಾರ್ಯಆನೆಬಾಗಿಲು , ಯುವಕ ಸಂಘದ ಜತೆ ಕಾರ್ಯದರ್ಶಿಗಳಾದ ಶಶಿಧರ ಆಚಾರ್ಯ ನೀರ್ಚಾಲ್, ಸಂತೋಷ್ ಕುಮಾರ್, ಮಿಥಲ್ ಕುಮಾರ್, ಸದಸ್ಯರಾದ ಪುರಂದರ ಆಚಾರ್ಯ ಆವಳ, ಆಕಾಶ್, ಮಹಿಳಾ ಸಂಘದ ಸದಸ್ಯೆ ರಾಧಕಾ ಸಂತೋಷ್ ಉಪಸ್ಥಿತರಿದ್ದರು. ಯುವಕ ಸಂಘದ ಕಾರ್ಯದರ್ಶಿ ವಸಂತ ಆಚಾರಿ ಸ್ವಾಗತಿಸಿ, ಜತೆ ಕಾರ್ಯದರ್ಶಿ ಹರಿಪ್ರಸಾದ್ ವಂದಿಸಿದರು.


Share with

Leave a Reply

Your email address will not be published. Required fields are marked *