ಮಿಯಪದವು: ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಅಂಗಡಿಮೊಗರು ಇಲ್ಲಿ ನಡೆದ ಮಂಜೇಶ್ವರ ತಾಲೂಕು ಮಟ್ಟದ ಸೃಜನೋತ್ಸವ 2023 ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾವರ್ಧಕ ಶಾಲಾ ಹಳೇ ವಿದ್ಯಾರ್ಥಿ ಸಂಘ ಗ್ರಂಥಾಲಯವು ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿಭಾಗದ ಸ್ಪರ್ಧೆಗಳಲ್ಲಿ ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸಮಾರೋಪ ಸಮಾರಂಭದಲ್ಲಿ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯರಾದ ಅಹಮ್ಮದ್ ಹುಸೈನ್ ಮಾಸ್ಟರ್, ತಾಲೂಕ್ ಲೈಬ್ರರಿ ಕೌನ್ಸಿಲ್ ಸೆಕ್ರೆಟರಿ ಕಮಲಾಕ್ಷ ಡಿ, ತಾಲೂಕ್ ಲೈಬ್ರರಿ ಕೌನ್ಸಿಲ್ ಉಪಾಧ್ಯಕ್ಷರಾದ ಶ್ರೀಕುಮಾರಿ ಟೀಚರ್, ಕೌನ್ಸಿಲ್ ಸದಸ್ಯರಾದ ಜಯಂತ ಮಾಸ್ಟರ್, ಮಂಜೇಶ್ವರ ಬಿ ಅರ್ ಸಿ ಯ ಮುಖ್ಯಸ್ಥರಾದ ವಿಜಯಕುಮಾರ್ ಪಾವಳ, ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮಾ ಎಸ್ ರೈ, ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯ ಬಶೀರ್ ಕುಟ್ಟುಡೆಲ್ ಮೊದಲಾದವರು ಉಪಸ್ಥಿತರಿದ್ದರು. ವಿಜೇತರನ್ನು ಅಭಿನಂದಿಸಲಾಯಿತು.