ಉಪ್ಪಳ: ನಲಿಕೆಯವರ ಸಮಾಜ ಸೇವಾ ಸಂಘ ಮಂಜೇಶ್ವರ ವಲಯದ ವತಿಯಿಂದ ಕ್ರೀಡೋತ್ಸವ ಡಿ.17ರಂದು ಪ್ರತಾಪನಗರದ ಶಿವಶಕ್ತಿ ಮೈದಾನದಲ್ಲಿ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಸಮಾಜದ ಮಂಜೇಶ್ವರ ವಲಯ ಅಧ್ಯಕ್ಷ ನಾರಾಯಣ ಜ್ಯೋತಿಷ್ಯ ಕುಡಾಲು ಉದ್ಘಾಟಿಸುವರು. ಕಬ್ಬಡ್ಡಿ, ತ್ರೋಬಾಲ್, ಹಗ್ಗಜಗ್ಗಾಟ ಮೊದಲಾದ ಸ್ಪರ್ಧೆಗಳು ನಡೆಯಲಿದೆ. ಸಂಜೆ 4ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮಾಜದ ಮಂಜೇಶ್ವರ ವಲಯ ಅಧ್ಯಕ್ಷ ನಾರಾಯಣ ಜ್ಯೋತಿಷ್ಯರು ಕುಡಾಲು ಅಧ್ಯಕ್ಷತೆ ವಹಿಸುವರು.
ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಧಾಗಣೇಶ್, ಮುಖಂಡರಾದ ಹರಿಶ್ಚಂದ್ರನ್ ಕಾಞಂಗಾಡ್, ಲಕ್ಷ್ಮಣ ಪುನಾರಂ ಅಡೂರು, ರಾಮ ಸಾಲಿಯಾನ್ ಮಂಗಲ್ಪಾಡಿ, ಗೋಪಾಲಕೃಷ್ಣ ಕಿನ್ವಾಲು, ಕೃಷ್ಣ.ಎನ್ ಸೋಮೇಶ್ವರ, ಮಂಜುನಾಥ ಬಾಯಾರು, ಐತ್ತಪ್ಪ ವರ್ಕಾಡಿ, ರಾಮಪ್ರಸಾದ್ ಖಂಡಿಗೆ, ಕಮಲ ಚೋಡಾಲ ಕಣ್ಣೂರು, ಸರಸ್ವತಿ.ಎನ್ ಮಂಗಲ್ಪಾಡಿ, ಕಮಲಾ ಬಾಲಕೃಷ್ಣ ಜೋಡುಕಲ್ಲು, ಅನೀಶ್ ಉಪ್ಪಳ, ಸುನಿತಾ ಗೋಪಾಲಕೃಷ್ಣ ಮಂಗಲ್ಪಾಡಿ ಮೊದಲಾದವರು ಭಾಗವಹಿಸುವರು. ಕ್ರೀಡಾರಂಗದಲ್ಲಿ ಸಾಧನೆಗೈದ ಕು.ಚಿತ್ರಕಲಾ ಎಂ.ಮಣ್ಣಾಪು ಕುಂಬ್ಡಾಜೆ ಮತ್ತು ಕು.ಲಾವಣ್ಯ ವರ್ಕಾಡಿ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಗುವುದು.