ಉಪ್ಪಳ: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಯುವಕ ಮೃತ್ಯು

Share with

ಉಪ್ಪಳ: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟಿದ್ದಾರೆ. ಮಂಗಲ್ ಪಾಡಿ ಕೃಷ್ಣ ನಗರ ನಿವಾಸಿ ಕೇಶವ ರವರ ಪುತ್ರ ಅವಿನಾಶ್ (34) ಡಿ.12ರಂದು ಸಂಜೆ ಪೆರಿಯಾರಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿ.9ರಂದು ರಾತ್ರಿ ಮನೆಯಲ್ಲಿ ಅಸ್ವಸ್ಥಗೊಂಡಿದ್ದರು ವಿಚಾರಿಸುವ ವೇಳೆ ವಿಷ ಸೇವಿಸಿರುವ ಬಗ್ಗೆ ಮನೆಯವರಲ್ಲಿ ತಿಳಿಸಿದ್ದಾರೆ ಕೂಡಲೇ ಅವರನ್ನು ಕಾಸರಗೋಡಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಿಸಲಾಗಿತ್ತು.

ಮಂಗಲ್ ಪಾಡಿ ಕೃಷ್ಣ ನಗರ ನಿವಾಸಿ ಕೇಶವ ರವರ ಪುತ್ರ ಅವಿನಾಶ್

ಅಲ್ಲಿಂದ ಡಿ.10ರಂದು ಬೆಳಿಗ್ಗೆ ಪೆರಿಯಾರ ಆಸ್ಪತ್ರೆಯಲ್ಲಿ ದಾಖಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಶೇಷ ಸೇವಿಸಲು ಕಾರಣವೇನೆಂದು ತಿಳಿದು ಬರಲಿಲ್ಲ ಕುಂಬಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರು ತಂದೆ, ತಾಯಿ ಕುಸುಮ, ಸಹೋದರ ಶಶಿಕುಮಾರ್, ಸಹೋದರಿ ಆಶಾ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *