ಮಂಜೇಶ್ವರ: ಶಬರಿಮಲೆ ಆದಾಯವನ್ನು ಮಾತ್ರ ಕಣ್ಣಿಟ್ಟಿರುವ ಕೇರಳ ಸರಕಾರ ಭಕ್ತರಿಗೆ ಮೂಲ ಭೂತ ಸೌಕರ್ಯ ಒದಗಿಸುತ್ತಿಲ್ಲ.ಭಕ್ತರು ನರಕ ಯಾತನೆ ಅನುಭವಿಸುವಂತಾಗಿದೆ ಇದರ ಶಾಪ ಎಡ ರಂಗ ಸರಕಾರಕ್ಕೆ ತಟ್ಟಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ರವೀಶ ತಂತ್ರಿ ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಬಿಜೆಪಿ ನೇತಾರರ ಸಭೆ ಉದ್ಘಾಟಿಸಿ ಅವರು ಪ್ರೇರಣಾ ಹೊಸಂಗಡಿ ಯಲ್ಲಿ ಮಾತನಾಡಿದರು. ಆರ್ಥಿಕವಾಗಿ ಮುಗಟ್ಟಿನಲ್ಲಿರುವ ಸರಕಾರ ಲೈಫ್ ಯೋಜನೆಯ ಹಣ ಬಿಡುಗಡೆ ಮಾಡದೇ ವಂಚಿಸುತ್ತಿದೆ, ಪಂಚಾಯತ್ ಗಳಿಗೆ ಅನುದಾನ ನೀಡುತ್ತಿಲ್ಲ. ಎಂದು ಆರೋಪಿಸಿದರು.ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮುಖಂಡ ರಾದ ಎ.ಕೆ ಕಯ್ಯಾರು, ಅಶ್ವಿನಿ ಎಂ ಎಲ್, ಕೆ ವಿ ಭಟ್, ಭಾಸ್ಕರ ಪೊಯ್ಯೇ, ಯಾದವ ಬಡಾಜೆ, ಹರಿಶ್ಚಂದ್ರ ಎಂ, ಸುಬ್ರಮಣ್ಯ ಭಟ್, ವಿನಯ ಭಾಸ್ಕರ್,ವಿಘ್ನಶ್ವರ ಭಟ್ ಮಾಸ್ಟರ್, ಲೋಕೇಶ್ ಜೋಡುಕಲ್ಲು, ಲಕ್ಷ್ಮಣ ಕುಂಜತ್ತೂರು ಉಪಸ್ಥಿತರಿದ್ದರು ಯತೀರಾಜ್ ಶೆಟ್ಟಿ ಸ್ವಾಗತ ನೀಡಿದರು. ತುಳಸಿ ಕುಮಾರಿ ವಂದಿಸಿದರು.