ಉಪ್ಪಳ: ಅಧ್ಯಾಪಕಿ ಅಸೌಖ್ಯದಿಂದ ನಿಧನ

Share with

ಉಪ್ಪಳ: ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಸ್ಕೂಲ್ ಅಧ್ಯಾಪಕ, ಕುಬಣೂರು ವಿದ್ಯಾನಗರ ನಿವಾಸಿ ಹರಿನಾಥ.ಕೆ.ಪಿ ರವರ ಪತ್ನಿ ರೂಪಶ್ರೀ [39] ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಇವರು ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಅಧ್ಯಾಪಿಕೆಯಾಗಿ ಸೇವೆಸಲ್ಲಿಸಿದ್ದರು. ಮೃತರು ಏಳ್ಕಾನ ಕೆದ್ವಾರ್ ರಾಮಚಂದ್ರ-ಕಮಲ ದಂಪತಿ ಪುತ್ರಿಯಾಗಿದ್ದಾರೆ. ಪತಿ, ಪುತ್ರಿ ದೃತಿ ಶೆಟ್ಟಿ, ಸಹೋದರಿಯರಾದ ಶಶಿ,ಪವಿತ್ರ, ಸಹೋದರ ಪ್ರಸನ್ನ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *