ಉಪ್ಪಳ: ಕರುಳು ಸಂಬಂಧ ಅಸೌಖ್ಯದಿಂದ ಬಳಲುತ್ತಿದ್ದ ಯುವಕ ನಿಧನರಾಗಿದ್ದಾರೆ. ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಗೌರವಾಧ್ಯಕ್ಷ ಉಪ್ಪಳ ನಿವಾಸಿ ಜಯರಾಮ ಎಂಬವರ ಪುತ್ರ ಸಾಯಿ ಪ್ರಸಾದ್ (43) ಡಿ.15ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಎರಡು ವರ್ಷಗಳಿಂದ ಕರುಳು ಸಂಬಂಧಿಸಿದ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಉಲ್ಬಣಗೊಂಡು ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ದಾಖಿಸಲಾಗಿತ್ತು. ಇವರು ರಚನಾ ಸಾಂಸ್ಕೃತಿಕ ಕಲಾ ಸಂಸ್ಥೆ ಉಪ್ಪಳ ಇದರ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ಮೃತರು ತಂದೆ, ತಾಯಿ ಭವಾನಿ, ಪತ್ನಿ ಪ್ರಿಯಾಂಕ, ಪುತ್ರಿ ಪೂರ್ವಿ, ಸಹೋದರಿಯರಾದ ಮಮತಾ, ಅನಿತಾ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ವೃತರ ಮನೆಗೆ ರಚನಾ ಸಾಂಸ್ಕೃತಿಕ ಕಲಾ ಸಂಸ್ಥೆಯ ಪದಾಧಿಕಾರಿಗಳು ಸಹಿತ ಹಲವಾರು ಮಂದಿ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.
ನಿಧನಕ್ಕೆ ರಚನಾ ಸಾಂಸ್ಕೃತಿಕ ಕಲಾ ಸಂಸ್ಥೆ ಉಪ್ಪಳ, ಶ್ರೀ ಭಗವತಿ ಕ್ಷೇತ್ರ ಉಪ್ಪಳ, ಶ್ರೀ ಭಗವತಿ ಮಹಿಳಾ ಸಂಘ, ಶ್ರೀ ಭಗವತಿ ಯುವಜನ ಸಂಘ ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಡಿ.17ರಂದು ಬೆಳಿಗ್ಗೆ 10ಗಂಟೆಗೆ ಮನೆ ಪರಿಸರದಲ್ಲಿ ನಡೆಯಲಿದೆ.