ಕಾಸರಗೋಡು: ದೇವರಗುಡ್ಡೆ ಶ್ರೀ ಶೈಲ ಮಹಾದೇವ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಡಿ.17ರಿಂದ ಜ.14ರ ಧನು ಮಾಸ ಒಂದರಿಂದ ಮಕರ ಸಂಕ್ರಮಣದವರೆಗೆ ಪ್ರತಿದಿನ ಪಾತಃಕಾಲ ಅರುಣೋದಯದ ಸುಪ್ರಭಾತ ಸಮಯದಲ್ಲಿ ಶ್ರೀ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರ ನೇತೃತ್ವದಲ್ಲಿ ಶ್ರೀ ಶೈಲೇಶ್ವರ ಮಹಾದೇವರಿಗೆ ಧನು ಪೂಜೆ ನಡೆಯುತ್ತಿದೆ.
ಶ್ರೀ ಶೈಲ ಮಹಾದೇವ ದೇವರಗುಡ್ಡೆ ದೇವಸ್ಥಾನದಲ್ಲಿ ಡಿ.17ರಿಂದ ಜ.14ರ ತನಕ ಪ್ರತೀ ದಿನ ಬೆಳಿಗ್ಗೆ 4.30 ರಿಂದ 5.30 ರ ವರೆಗೆ ಭಜನೆ, 5.45ಕ್ಕೆ ಧನು ಪೂಜೆ ನಡೆಯಲಿದ್ದು, ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಹಾಗೂ ಉಪಹಾರ ನೀಡಲಾಗುತ್ತದೆ.