ಪುತ್ತೂರು: ಪುತ್ತೂರು ನೆಹರುನಗರದ ಕಲ್ಲೇಗದಲ್ಲಿ ಮಾರುತಿ ಓಮ್ನಿ ಹಾಗೂ ಆಲ್ಟೋ ಕಾರು ನಡುವೆ ಅಪಘಾತ ಸಂಭವಿಸಿ ಯಕ್ಷಗಾನ ಕಲಾವಿದರು ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ಡಿ.20 ರಂದು ನಡೆದಿದೆ ಎಂದು ವರದಿಯಾಗಿದೆ.
ಯಕ್ಷಗಾನ ಕಾರ್ಯಕ್ರಮ ಮುಗಿಸಿ ಪುತ್ತೂರಿಗೆ ಬರುತ್ತಿದ್ದ ಕಲಾವಿದರು ಇದ್ದ ಮಾರುತಿ ಓಮ್ನಿ ಮತ್ತು ವಿರುದ್ಧ ಧಿಕ್ಕಿನಿಂದ ಮಂಗಳೂರು ತೆರಳುತ್ತಿದ್ದ ಆಲ್ಟೋ ಕಾರು ನಡುವೆ ನೆಹರುನಗರದ ಕಲ್ಲೇಗ ಸಮೀಪ ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಖಾಸಗಿ ಬಸ್ಗೂ ಡಿಕ್ಕಿಯಾಗಿದೆ ಎನ್ನಲಾಗಿದೆ. ಮಾರುತಿ ಓಮ್ನಿಯಲ್ಲಿದ್ದ ಮೂವರು ಯಕ್ಷಗಾನ ಕಲಾವಿದರು ಮತ್ತು ಆಲ್ಟೋದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಗಾಯವಾಗಿದೆ. ತೀವ್ರ ಗಾಯಗೊಂಡ ಆಲ್ಟೋದಲ್ಲಿ ಪ್ರಯಾಣಿಕರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.