ಕುಂದಾಪುರ: ಕುಂದಾಪುರದ ಕಟ್ಕೇರೆ ಎಂಬಲ್ಲಿ 7ನೇ ತರಗತಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.20ರಂದು ನಡೆದಿದೆ.
ಮೃತ ಬಾಲಕಿಯನ್ನು ರಾಜಶೇಖರ ಎಂಬವರ ಪುತ್ರಿ ರಿಷಿತಾ(13) ಎಂದು ಗುರುತಿಸಲಾಗಿದ್ದು, ಆಕೆ 7ನೇ ತರಗತಿಯಲ್ಲಿ ಓದುತ್ತಿದ್ದು, ಶಾಲೆಯಿಂದ ಮನೆಗೆ ಬಂದವಳೇ ಮನೆಯ ಸಮೀಪದ ಬಾವಿಗೆ ಹಾರಿದಳು. ಆಗ್ನಿಶಾಮಕ ದಳವನ್ನು ಕರೆಯಿಸಿ ಆಕೆಯನ್ನು ಮೇಲೆತ್ತಿದರಾದರೂ, ಅದಾಗಲೇ ಮೃತಪಟ್ಟಿದ್ದಳು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಕೆ ಅನೇಕ ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.