ಉಪ್ಪಳ: ಶ್ರೀ ಸದಾಶಿವ ಕಲಾವೃಂದ ಅಂಬಾರು ಮಂಗಲ್ಪಾಡಿ ಇದರ ಸುವರ್ಣ ಸಂಭ್ರಮವನ್ನು ಚೆರುಗೋಳಿ ಶ್ರೀ ಧೂಮಾವತಿ ಕೋಮಾರು ಚಾಮುಂಡಿ ದೈವದ ಜಾತ್ರಾ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇದರ ಅಂಗವಾಗಿ ಡಿ.22 ರಾತ್ರಿ 8.30ಕ್ಕೆ ಸ್ಥಳಿಯ ಮಕ್ಕಳಿಂದ ನೃತ್ಯ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತ ಸದಸ್ಯರಿಗೆ ಬಹುಮಾನ ವಿತರಣೆ, 23ರಂದು ಸಂಜೆ 6.30ಕ್ಕೆ ರಸಮಂಜರಿ, 24ರಂದು ರಾತ್ರಿ 7ಕ್ಕೆ ನೃತ್ಯ ಸಂಗಮ ಪರಂಕಿಲ ಇವರಿಂದ ನೃತ್ಯವೈಭವ, ರಾತ್ರಿ 8ಕ್ಕೆ ನಡೆಯುವ ಸುವರ್ಣ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು.
ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ಅಧ್ಯಕ್ಷತೆ ವಹಿಸುವರು. ವಿವಿಧ ವಲಯದ ಗಣ್ಯರಾದ ಪಿ.ಆರ್.ಶೆಟ್ಟಿ ಪೊಯ್ಯೆಲು, ಶಶಿಧರ ಶೆಟ್ಟಿ ಗ್ರಾಮ ಚಾವಡಿ ಶಿರಿಯ, ಪದ್ಮರಾಜ್.ಆರ್, ಪ್ರೇಂಕುಮಾರ್ ಐಲ, ಮೋಹನ್ ಶೆಟ್ಟಿ ಮಜ್ಜಾರ್, ಕುಂಬಳೆ ಠಾಣೆಯ ಸಿ.ಐ ಅನೂಬ್ ಕುಮಾರ್.ಇ, ಅರವಿಂದ ಹೊಳ್ಳ ತಿಂಬರ ಉಪಸ್ಥಿತರಿರುವರು. ರಾತ್ರಿ 10.30ರಿಂದ ಚಾಪರ್ಕ ಕಲಾವಿದರಿಂದ ಪುದರ್ ದೀದಾಂಡ್ ತುಳು ನಾಟಕ ಪ್ರದರ್ಶನಗೊಳ್ಳಲಿದೆ.