ಬಂಟ್ವಾಳ: ತಾಲೂಕಿನ ಗೋಳ್ತಮಜಲು, ಬಾಳ್ತಿಲ, ವೀರಕಂಬ, ಅಮ್ಮ್ಟೂರು, ಬೋಳಂತೂರು, ಬೊಂಡಾಲ ಗ್ರಾಮಗಳನ್ನು ಒಳಗೊಂಡ ಬಿಲ್ಲವ ಸಮಾಜ ಸೇವಾ ಸಂಘ (ರಿ)ಕಲ್ಲಡ್ಕ ವಲಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಡಿ.24ರಂದು ಪದ್ಮಾವತಿ ಕಲ್ಯಾಣ ಮಂಟಪ ಕಲ್ಲಡ್ಕದಲ್ಲಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿ ಏಳ್ತೀಮಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಹಿರಿಯ ಮೋಟರ್ ವಾಹನ ನಿರೀಕ್ಷಕರಾದ ಚರಣ್ ಕೆ ಮಾತನಾಡಿ ಪ್ರಸ್ತುತ ಬಿಲ್ಲವ ಸಮುದಾಯದ ಯುವ ಜನತೆ ಉತ್ತಮ ವಿದ್ಯಾವಂತರಾಗುತ್ತಿದ್ದಾರೆ ಆದರೆ ಅವರಲ್ಲಿ ಉತ್ತಮ ಸಂಸ್ಕಾರದ ಗುಣದ ಕೊರತೆ ಎದ್ದು ಕಾಣುತ್ತಿದೆ. ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಬೇಕು, ಶ್ರೀ ನಾರಾಯಣ ಗುರುವರ್ಯರ ಜನ್ಮ ದಿನಾಚರಣೆ ಜಾತಿಗೆ ಸೀಮಿತವಾಗದೆ ಸಮಾಜದ ಎಲ್ಲರೂ ಸೇರಿಸಿಕೊಂಡು ಆಚರಿಸಬೇಕು ಎಂದರು.
ಮುಖ್ಯ ಅತಿಥಿಗಳಾದ ಕುದ್ರೋಳಿ ಗೋಕರ್ನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಬಿಲ್ಲವರು ಪಕ್ಷಬೇಧ ಮರೆತು ತಮ್ಮೊಳಗಿನ ವೈ ಮನಸನ್ನು ಬಿಟ್ಟು ಒಟ್ಟಾಗಬೇಕು ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅವಲಾಡಿಸಿಕೊಳ್ಳಬೇಕು ಎಂದರು. ಕೇಶವ ಶಾಂತಿ ನರಿಕೊಂಬು ಇವರ ಪುರೋಹಿತ್ಯದಲ್ಲಿ ಶ್ರೀ ನಾರಾಯಣ ಗುರುಪೂಜೆ ಹಾಗೂ ಶ್ರೀ ಶಾರದಾಂಬ ಭಜನಾ ಮಂದಿರ ಶೃಂಗ ಗಿರಿ ಗುಂಡಿಮಜಲು ಇವರಿಂದ ಭಜನಾ ಸಂಕೀರ್ತನೆ ನೆರವೇರಿತು.
ಕಾರ್ಯಕ್ರಮದಲ್ಲಿ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ಕೆ ಅಣ್ಣು ಪೂಜಾರಿ, ಗೋಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರೇಮ ಪುರುಷೋತ್ತಮ, ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಸುರೇಶ್, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ್ ಬಂಗೇರ, ಪದವಿ ಪರೀಕ್ಷೆಯಲ್ಲಿ ಮಂಗಳೂರು ಯುನಿವರ್ಸಿಟಿಯಲ್ಲಿ ನಾಲ್ಕನೇ ರಾಂಕ್ ವಿಜೆತೆ ವಿದ್ಯಾರ್ಥಿನಿ ನಿರೀಕ್ಷಾ ಅರೆಬೆಟ್ಟು ಮೊದಲಾದವರನ್ನು ಸನ್ಮಾನಿಸಲಾಯಿತು.
ಬಿಲ್ಲವ ಬಾಂಧವರಿಗಾಗಿ ನಡೆದ ಬಿಲ್ಲವ ಕ್ರೀಡಾಕೂಟ -2023ರ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕಲ್ಲಡ್ಕ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೊಸಕಟ್ಟ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ಉದ್ಯಮಿ ಮಂಜುನಾಥ ಮುಲಾರು, ಉದ್ಯಮಿ ಮಿಥುನ್ ಪೂಜಾರಿ ಹೊಸಮನೆ, ಮಾಜಿ, ಅಮ್ಮ್ಟೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶರತ್ ಕುಮಾರ್, ಹಿರಿಯರಾದ ತಿಮ್ಮಪ್ಪ ಪೂಜಾರಿ ವೀರಕಂಭ ಮೊದಲಾದವರು ಉಪಸ್ಥಿತರಿದ್ದರು.
ವಂಶಿ ತೋಟ ಪ್ರಾರ್ಥಿಸಿ, ವಸಂತ ಬಟ್ಟಹಿತ್ಲು ಸ್ವಾಗತಿಸಿ, ಬಿಲ್ಲವ ಸಂಘದ ಮಹಿಳಾ ಅಧ್ಯಕ್ಷೆ ಪುಷ್ಪ ಸತೀಶ್ ಬಹುಮಾನ ಪಟ್ಟಿ ವಾಚಿಸಿದರು. ಯೋಗೀಶ್ ತೋಟ ವಂದಿಸಿದರು. ಸಂತೋಷ್ ಬೊಳ್ಪೋಡಿ ಹಾಗೂ ವಸಂತ ಟೈಲರ್ ನೆಟ್ಲ ಕಾರ್ಯಕ್ರಮ ನಿರೂಪಿಸಿದರು.