ಉಪ್ಪಳ: ಕುಂಬಳೆ ಬಳಿಯ ಕಾನ ಶ್ರೀ ಶಂಕರನಾರಾಯಣ ದೇವರ ಮಠದಲ್ಲಿ ಹೊಸ್ತಿನ ದೇವಕಾರ್ಯ ಮತ್ತು ಶ್ರೀ ಧೂಮಾವತಿ ದೈವದ ಕೋಲ ಜ.27 ಮತ್ತು 28ರಂದು ನಡೆಯಲಿದೆ.
ಇದರ ಅಂಗವಾಗಿ ಜ.26ರಂದು ಬೆಳಿಗ್ಗೆ 7ಕ್ಕೆ ಧೂಮಾವತೀ ಸನ್ನಿಧಿಯಲ್ಲಿ ಆಚಾರ್ಯರಿಂದ ಪಂಚಗವ್ಯ ಹವನ, ಕಲಶಾಭಿಷೇಕ, 10ಕ್ಕೆ ಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಕೊಪ್ಪರಿಗೆ ಮುಹೂರ್ತ, 27ರಂದು ಬೆಳಿಗ್ಗೆ 6.30ಕ್ಕೆ ಗಣಪತಿ ಹವನ, ಪಂಚಗವ್ಯ ಹವನ, ನವಕಾಭಿಷೇಕ, 8ಕ್ಕೆ ಸಾಮೂಹಿಕ ರುದ್ರ ಪಾರಾಯಣ, ಬೆಳಿಗ್ಗೆ 10.30ಕ್ಕೆ ತುಲಾಭಾರ ಸೇವೆ, 11ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂತರ್ಪಣೆ, ಸಂಜೆ 6.30ಕ್ಕೆ ಕಾವಿ ಸುಬ್ರಹ್ಮಣ್ಯ ಯಕ್ಷಬಳಗ ವರ್ಕಾಡಿ ಇವರಿಂದ ಇಂದ್ರಜಿತು ಕಾಳಗ ತಾಳಮದ್ದಳೆ, 7.30ಕ್ಕೆ ಭಂಡಾರ ಮನೆಯಿಂದ ಶ್ರೀ ಧೂಮಾವತಿ ದೈವದ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಿಲ ಮುಗಿಸಿ ಶ್ರೀ ಶಂಕರನಾರಯಣ ದೇವರ ಮಠಕ್ಕೆ ಬರುವುದು, ಶ್ರೀದೆವರಿಗೆ ಮಹಾಪೂಜೆ, ಶ್ರೀ ಧೂಮಾವತೀ ದೈವದ ತೊಡಂಗಲು, 28ರಂದು ಬೆಳಿಗ್ಗೆ 9.30ಕ್ಕೆ ಶ್ರೀ ಧೂಮಾವತಿ ದೈವದ ಕೋಲ ನಡೆಯಲಿದೆ.