ಮಂಗಳೂರು: ದನ ಕಳವು ಮಾಡುತ್ತಿದ್ದ ಆರೋಪ; ಇಬ್ಬರ ಬಂಧನ

Share with

ಮಂಗಳೂರು: ಕಾರುಗಳಲ್ಲಿ ಮಂಗಳೂರಿನ ವಿವಿಧ ಕಡೆಗಳಿಗೆ ತೆರಳಿ ಜಾನುವಾರುಗಳನ್ನು ಕಳವು ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಕೈಕಂಬ ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್ ಪೋಸ್ಟ್ ನಲ್ಲಿ ಬಂಧಿಸಲಾಗಿದೆ.

ದನ ಕಳವು ಮಾಡುತ್ತಿದ್ದ ಆರೋಪಿಗಳು

ಬಂಧಿತರನ್ನು ಮೂಡುಬಿದಿರೆ ಪಡುಕೊಣಾಜೆ ಗ್ರಾಮದ ನೀರಳಿಕೆ ಹೌಸ್ ನಿವಾಸಿ ಇಮ್ರಾನ್ ಇಬ್ರಾಹಿಂ (24) ಮತ್ತು ಕಲ್ಲಬೆಟ್ಟು ಗ್ರಾಮದ ಗಂಟಲಕಟ್ಟೆ ನಿವಾಸಿ ನಾಸಿರ್ ಯಾನೆ ನಾಚಿ (26) ಎಂದು ಗುರುತಿಸಲಾಗಿದೆ.

ಬಂಧಿತರಿಂದ ದನ ಕಳವು ಮಾಡಲು ಉಪಯೋಗಿಸುತ್ತಿದ್ದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಸ್ವಿಫ್ಟ್ ಕಾರು, ರಿಟ್ಜ್ ಕಾರು ಹಾಗೂ ಇನ್ನಿತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳು ಬಜಪೆ ಠಾಣೆ ನಿರೀಕ್ಷಕರಾದ ಸಂದೀಪ್ ಅವರ ಆದೇಶದಂತೆ ಎಸ್ಐ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ.


Share with

Leave a Reply

Your email address will not be published. Required fields are marked *