ಮಂಜೇಶ್ವರ: ಕಳಿಯೂರು ರಕ್ತೇಶ್ವರೀ ಪದವಿನ ಶ್ರೀ ರಕ್ತೇಶ್ವರಿ ಭಜನಾ ಸಂಘದ 27ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಹೂವಿನ ಪೂಜೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜನವರಿ 7ರಂದು ನಡೆಯಲಿದೆ.
ಬೆಳಿಗ್ಗೆ 8ಕ್ಕೆ ಮಹಾಗಣಪತಿ ಹವನ, 9.30ಕ್ಕೆ ಅಶ್ವಥ ಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12ಕ್ಕೆ ಹೂವಿನ ಪೂಜೆ, ಮಧ್ಯಾಹ್ನ 1ಕ್ಕೆ ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ನಡೆಯಲಿದೆ.