ಮಂಜೇಶ್ವರ: ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಫ್ಯಾಸಿಸ್ಟ್ ವಿಮೋಚನಾ ಸಭೆ

Share with

ಮಂಜೇಶ್ವರ: ಡಿಜಿಪಿ ಕಛೇರಿ ಮಾರ್ಚ್ ಸಂದರ್ಭದಲ್ಲಿ ಕೆ .ಪಿ.ಸಿ.ಸಿ ಅಧ್ಯಕ್ಷರ, ವಿಪಕ್ಷ ನಾಯಕರ ಸಹಿತ ಕಾಂಗ್ರೆಸ್ ನೇತಾರರಿಗೆ ಅಪಾಯವನ್ನುಂಟು ಮಾಡಲು ಗೂಢಾಲೋಚನೆ ಮಾಡಿದ ಕೇರಳದ ಸಿಪಿಎಂ ಆಡಳಿತ ಭೀಕರತೆಕ್ಕೆದುರಾಗಿ ಹಾಗೂ ಪೊಲೀಸ್ ದೌರ್ಜನ್ಯವನ್ನು ಪ್ರತಿಭಟಿಸಿ ಫ್ಯಾಸಿಸ್ಟ್ ವಿಮೋಚನಾ ಸಭೆ ಹೊಸಂಗಡಿ ಪೇಟೆಯಲ್ಲಿ ಜರುಗಿತು.

ಫ್ಯಾಸಿಸ್ಟ್ ವಿಮೋಚನಾ ಸಭೆ ಹೊಸಂಗಡಿ ಪೇಟೆಯಲ್ಲಿ ಜರುಗಿತು.

ಪ್ರತಿಭಟನಾ ಸಂಗಮವನ್ನು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ದನ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಸರಕಾರ ಫ್ಯಾಸಿಸ್ಟ್ ಸರಕಾರವಾಗಿದೆ, ದುರಾಡಳಿತಧ ವಿರುದ್ಧ ಪ್ರತಿಭಟಿಸುವವರನ್ನು ಹಿಂಸೆಯ ಮೂಲಕ ದಮನಿಸುವ ಕಿರಾತಕ ಸರಕಾರ ಈ ರಾಜ್ಯವನ್ನಾಳುತ್ತಿದೆ, ಶಬರಿಮಲೆ ಯಾತ್ರಾರ್ತಿಗಳಿಗೆ ಮೂಲಭೂತ ಸೌಕರ್ಯ ವನ್ನು ಒದಗಿಸದ ನರಸತ್ತ ಸರಕಾರ ಈ ರಾಜ್ಯದಿಂದ ತೊಲಗಿಸಬೇಕೆಂದು ಅವರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷ ಮನ್ಸೂರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಕಬೈಲು ಸತೀಶ ಅಡಪ್ಪ ಮುಖ್ಯ ಪ್ರಭಾಷಣೆಗೈದರು. ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ ಪ್ರಾಸ್ತಾವಿಕ ಭಾಷಣಗೈದರು. ಖಲೀಲ್ ಬಜಾಲ್ ಸ್ವಾಗತಿಸಿದರು. ನೇತಾರರಾದ ಬಾಬು ಬಂದ್ಯೋಡು, ರ‍್ಷಾದ್ ಮಂಜೇಶ್ವರ, ಅಝೀಝ್ ಕಲ್ಲೂರು, ಸದಾಶಿವ.ಕೆ, ಓಂಕೃಷ್ಣ, ಹಮೀದ್ ಕಣಿಯೂರು, ಮೆಹಮೂದ್ ಕೆದುಬಾಂಡಿ, ರಜತ್ ವೇಗಸ್, ಹಾರಿಸ್ ಪಿ.ಕೆ, ಅಬೂಬಕ್ಕರ್ ಪೊಯ್ಯೆ, ಹನೀಫ್ ಕುಮೇರ್, ವಿಕ್ಟರ್ ವೇಗಸ್, ಸಿದ್ದೀಕ್ ಮಂದ್ರಿ, ಹುಸೈನ್ ಮಚ್ಚಂಪಾಡಿ, ಯಾಕೂಬ್ ಕೋಡಿ, ಮುಂತಾದವರು ಉಪಸ್ಥಿತರಿದ್ದರು. ದಾಮೋದರ್ ಮಾಸ್ತರ್ ವಂದಿಸಿದರು.


Share with

Leave a Reply

Your email address will not be published. Required fields are marked *